ಚಳ್ಳಕೆರೆ : ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ನಿಂದ ಶ್ರೀಕರಿಬಸವೇಶ್ವರ ಮಹೋತ್ಸವವನ್ನು ಫೆಬ್ರವರಿ 11 ರಿಂದ ಫೆಬ್ರವರಿ 12ನೇ ದಿನಾಂಕದವರೆಗೆ ಎರಡು ದಿನಗಳ ಕಾಲ ನಗರದ ನರಹರಿನಗರದ ನಗರದಲ್ಲಿ ಶ್ರೀ ಕರಿಬಸವೇಶ್ವರ ಅಜ್ಜಯ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ವೀರಭದ್ರಸ್ವಾಮಿ ತಿಳಿಸಿದ್ದಾರೆ .
ಇನ್ನು ಶ್ರೀ ಕರಿಬಸವೇಶ್ವರ ಅಜ್ಜಯ್ಯ ಪ್ರತಿಷ್ಠಾಪನ ಅಂಗವಾಗಿ ನಗರದ ಸರ್ವ ಭಕ್ತಾದಿಗಳು ಎರಡು ದಿನಗಳ ಕಾಲ ಶ್ರೀ ಅಜ್ಜಯ್ಯನ ಕೃಪೆಗೆ ಪಾತ್ರರಾಗಬೇಕು ಎಂದು, ಸರ್ವ ಭಕ್ತಾದಿಗಳು ಆಗಮಿಸಬೇಕು ಭಕ್ತರ ದರ್ಶನಕ್ಕಾಗಿ ನಗರದ ನೆಹರು ಸರ್ಕಲ್ ನಿಂದ ನರಹರಿನಗರದವರೆಗೂ ಉಚಿತ ಬಸ್ ಸೇವೆ ಲಭ್ಯವಿರುತ್ತದೆ.
ದೇವಾಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನಗಳ ಮೂಲಕ ಶ್ರೀ ಕರಿಬಸವೇಶ್ವರ ಅಜ್ಜಯ್ಯ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸರ್ವಭಕ್ತರು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ.

