ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಹಿಂದೂ ಧರ್ಮ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ರ್.ರಘುಮೂರ್ತಿ ಹೇಳಿದರು

ತಳುಕು : ಹೋಬಳಿಯ ಯಾದಲಗಟ್ಟೆ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ.

ಹಿಂದೂ ಸನಾತನ ಸಂಸ್ಕೃತಿ ಶ್ರೀಮಂತ ವಾಗಬೇಕಾದರೆ ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯದವರು ಕೈಗೊಳ್ಳುವಂತಹ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲ ಕಾರಣವಾಗಿವೆ.

ಈ ಬುಡಕಟ್ಟು ಸಮುದಾಯಗಳು ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರಂತ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಕೂಡ ಪರಿಪಾಲಿಸುತ್ತಿವೆ.

ಚಿತ್ರದುರ್ಗದ ಪರಂಪರೆ ಮತ್ತು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತ ಗಾದ್ರಿಪಾಲ ನಾಯಕ ಮತ್ತು ಎರಮಂಚ ನಾಯಕ ದೇವರುಗಳ ಆರಾಧನೆ ಇದರ ಜೊತೆಗೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮತ್ತು ಗೌರಸಮುದ್ರ ಮಾರಮ್ಮ ದೇವಿಯ ಭಕ್ತಿ ಭಾವ ಪರವಶಗಳು ಇಲ್ಲಿಯ ಜನಗಳ ಮನದಲ್ಲಿ ಮುಗಿಲು ಮುಟ್ಟಿವೆ ಇದರ ಜೊತೆ ಇಲ್ಲಿನ ನಿವಾಸಿಗಳಿಗೆ ಸ್ವಾಭಿಮಾನದ ಸಂಕೇತವಾಗಿದೆ.

ಕಟ್ಟು ನಿಟ್ಟಿನ ವ್ರತಾ ಮತ್ತು ಪೂಜಾ ವಿಧಿ ವಿಧಾನಗಳು ಇವರ ಶಿಸ್ತುಏಕಾಗ್ರತೆಯನ್ನು ಹೆಚ್ಚಿಸಿವೆ

ಈ ದೇವರ ಆರಾಧನೆಯಿಂದ ಮತ್ತು ಹೊಸ ವರ್ಷದ ಈ ದಿನದ ಪೂಜೆಯಿಂದ ಸಮಸ್ತ ತಾಲ್ಲೂಕಿನ ಜನತೆಯ ಬದುಕು ಹಸನಾಗಲಿ ಈ ಭಾಗದ ರೈತರು ನಿರೀಕ್ಷಿಸಿದಂತೆ ನೆಮ್ಮದಿಯ ಬದುಕು, ನಿಮ್ಮದಾಗಲಿ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಮಿಂದೆದ್ದಿರುವಂತಹ ಇಲ್ಲಿಯ ಜನಕ್ಕೆ ಮತ್ತು ಈ ಕುಟುಂಬಗಳ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ಉನ್ನತ ಶಿಕ್ಷಣದ ಅಗತ್ಯವಿದ್ದು ಎಲ್ಲ ಕುಟುಂಬದ ಮಕ್ಕಳಲ್ಲಿಯೂ ಕೂಡ ಈ ಅಂಶಗಳು ಮನೆ ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದಂತಹ ಹೊನ್ನೂರ್ ಗೋವಿಂದಪ್ಪ ಎಲ್ಐಸಿ ಓಬಣ್ಣ ರಂಗಪ್ಪರೆಡ್ಡಿ ಎರಗುಂಟಪ್ಪ ನಾಗರಾಜು ಮತ್ತು ಯಾದಲಕಟ್ಟೆ ಗ್ರಾಮದ ಯುವಕರು ಮತ್ತು ಭಕ್ತಾದಿಗಳು ಇನ್ನು ಇತರರು ಇದ್ದರು.

About The Author

Namma Challakere Local News
error: Content is protected !!