ಚಿಕ್ಕ ಉಳ್ಳಾರ್ತಿ ಬೋರದೇವರ ಜಾತ್ರೆ ಮಹೋತ್ಸವ ಪ್ರೆ 21 ರಿಂದ 23 ವರಿಗೆ

ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ ಗ್ರಾಮದಲ್ಲಿ ಸೋಮವಾರ ದಿನ ಶ್ರೀ ಬೋರದೇವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಗದ್ದಿಗೆ ಪೂಜಿ ನೆರವರಿಸಲಾಯಿತು ಈ ಸಂದರ್ಭದಲ್ಲಿ ಕುಲಸ್ಥರು ಸೇರಿ ಪ್ರೆಬವರಿ 21 ರಿಂದ 23ರವರೆಗೆ ಚಿಕ್ಕ ಉಳ್ಳಾರ್ತಿಯಲ್ಲಿ ನಡೆಯಲ್ಲಿದ್ದು ಈ ಜಾತ್ರೆ ಮಹೋತ್ಸವ 5 ವರ್ಷಗಳೊಮ್ಮೆ ನಡೆಯುತ್ತೇದೆ ತಾವುಗಳ ದನ ಮನ ಕೊಟ್ಟು ಎಲ್ಲಾರು ಸೇರಿಕೊಂಡು ಅದ್ದೂರಿಯಾಗಿ ಯಶ್ವವಿಯಾಗಿ ಜರುಗಿಸಬೇಕೆಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪ್ಪಿಲೆ ಓಬಣ್ಣ ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ ಮಾತನಾಡಿ ಬುಡಕಟ್ಟು ಸಂಸ್ಕೃಂತಿಯ ಆರಾಧೈವ ಶ್ರೀ ಬೋರದೇವರ ಸ್ವಾಮಿಯ ಜಾತ್ರ ಮಹೋತ್ಸವ ನಮ್ಮ ಮ್ಯಾಸನಾಯಕರ ಆಚರಣೆಯನ್ನು ಮಾಡುತ್ತಾ ಬಂದಿದ್ದವೆ ಆದ್ದರಿಂದ ಬೋರದೇವರ ಹಾಗೂ ಓಬಳೇ ದೇವರ ಅಣ್ಣ ತಮ್ಮಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಯಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓ ಸೋಮಶೇಖರ, ಪಾಟೀಲ್ ಪಿ ಎಂ ಮಹದೇವಣ್ಣ, ಡಿ ಟಿ ಕಾಮರಾಜ, ಬೋರಜ್ಜಯ್ಯ, ಮ್ಯಾಕಲ ಮಲ್ಲಯ್ಯ, ಗೊಂಚಿ ಸಣ್ಣಬೋರಯ್ಯ, ಗಣೇಶ ಬೋರಯ್ಯ, ಮರಡಿ ಬೋರಯ್ಯ, ಗೊಂಚಿಗಾರು ವಂಶಸ್ಥರು ಗೌಡ್ರು ವಂಶಸ್ಥರು ಹಾಗೂ ಕುಲಭಾಂದವರು ಇದ್ದರು.

About The Author

Namma Challakere Local News
error: Content is protected !!