ಚಳ್ಳಕೆರೆ : ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಅಂಬಿಗರ ಚೌಡಯ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯ ಪ್ರಾಂಗಣದಲ್ಲಿ ನಿಜಶರಣಅಂಬಿಗರ ಚೌಡಯ್ಯ ರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವ ಮೂಲಕ ಮಾತನಾಡಿದರು, ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ಬಸವಣ್ಣನವರಿಂದ ಲಿಂಗದ ದೀಕ್ಷೆಯನ್ನು ಪಡೆದು. ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ ಎಂದರು.
ಬೆಸ್ತರ ಸಂಘದ ತಾಲೂಕು ಅಧ್ಯಕ್ಷ
ಶಿವನಾಂದ ಮಾತನಾಡಿ, ಮೇಳು ಕೀಳು ಎಂಬ ಭೇದ ಭಾವವನ್ನು ತೊಡೆದು ಹಾಕುವಲ್ಲಿ ಇವರ ಕೀರ್ತನೆಗಳು ಪ್ರಮುಖ ಪಾತ್ರವಾಗಿದ್ದವು, ಇನ್ನೂ ನವ ಧಾನ್ಯಗಳ ಮೂಲಕ ಪರಸ್ರ್ತಿಗೆ ಒಲಿಕೆ ಮಾಡಿದ ಚೌಡಯ್ಯ, ನವರು ಆಧುನಿಕ ಕಾಲಘಟ್ಟಕ್ಕೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಪೌರಾಯುಕ್ತ ಜಗರೆಡ್ಡಿ, ಇಓ.ಶಶಿಧರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಸಿಟಿ.ಶ್ರೀನಿವಾಸ್, ಅನ್ವರ್, ಶಿವಾನಂದ, ತಿಪ್ಪೇಸ್ವಾಮಿ,
ತಾಪಂ.ನಾಮ ನಿರ್ದೇಶನ ಸದಸ್ಯ ಸುರೇಶ್, ಮಹಿಳೆಯರು, ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

