ಮಹೇಶ್ ಕುಮಾರ್ ಪಿ
ಅಥ್ಲೆಟಿಕ್ಸ್ ಕ್ರೀಡಾಪಟು
ದುರ್ಗಾನ್ಸ್ ಅಥ್ಲೆಟಿಕ್ಸ್ ಅಕಾಡೆಮಿ
ತಂದೆ :- ಪರಮೇಶ್ವರಪ್ಪ,
ತಾಯಿ :-ಗಂಗಮ್ಮ
ಇವರು ತಮ್ಮ ಗ್ರಾಮದಲ್ಲಿ ಮೊದಲ ಸೈನಿಕನಾಗುತ್ತಿದ್ದು ಹೊಸಕೋಟೆ ಎಂಬ ಚಿಕ್ಕ ಗ್ರಾಮ ದಲ್ಲಿ ವಾಸವಾಗಿದ್ದು ಮೊಳಕಾಲ್ಮುರು ತಾಲೂಕು ಚಿತ್ರದುರ್ಗ ಜಿಲ್ಲೆ.
ಇವರು ಕಿರಿಯ ಮಗನಾಗಿರುತ್ತಾನೆ.ಈ ವ್ಯಕ್ತಿ ಬಡಕುಟುಂಬ ದಲ್ಲಿ ಜನಿಸಿ ತನ್ನ ತಂದೆ ತಾಯಿಗಳು ಕೂಲಿ ಕಾರ್ಮಿಕರಾಗಿರುತ್ತಾರೆ ಈ ಅಭ್ಯರ್ಥಿಯು ಸರ್ಕಾರಿ ಕಲಾ ಕಾಲೇಜ್ ನಲ್ಲಿ ದ್ವಿತೀಯ B A ವ್ಯಾಸಂಗ ಮಾಡಿದರು ಈ ಅಭ್ಯರ್ಥಿಯು ಕ್ರೀಡಾ ವಿಭಾಗದಲ್ಲಿ ನಾಗರಾಜ್ ಅಂತಾರಾಷ್ಟ್ರೀಯ ಕ್ರೀಡಾಪಾಟು ಅವರ ಹತ್ತಿರ ತರಬೇತಿ ಪಡೆದು ರಾಷ್ಟ್ರಮಟ್ಟದ ಗುಡ್ಡಗಾಡು ಓಟದಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ ,
ಈ ವಿದ್ಯಾರ್ಥಿ ಸೇನೆಗೆ ಸೇರುವ ಆಸಕ್ತಿಗೆ ತನ್ನ ಊರಿನಿಂದ 100 ಕಿಲೋಮೀಟರ್ ದೂರದಿಂದ ಬಂದು NCC ತರಬೇತಿ ಪಡೆದು NCC ‘B’ ಸರ್ಟಿಫಿಕೇಟ್ ನಲ್ಲಿ A ಗ್ರೇಡ್ ನಲ್ಲಿ ಉತ್ತಿರ್ಣನಾಗಿದ್ದು
ಡಾ. ಎಸ್. ಆರ್. ಲೇಪಾಕ್ಷಿ ಹಾಗೂ ಅಂಜನ್ ರವರ ಸಹಯೋಗದಲ್ಲಿ NCC ತರಬೇತಿ ಪಡೆದರು .
28/12/2025 ರಂದು ನಡೆದ 60ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ – 2025 ರಲ್ಲಿ 6 ನೇ ಸ್ಥಾನ ಪಡೆದು 24/01/2026 ರಂದು ಝಾರ್ಖಾಂಡ್ ರಾಜ್ಯದ ರಾಂಚಿ ಯಲ್ಲಿ ನಡೆಯುವ 60ನೇ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ – 2026 ಕ್ಕೆ ಮಹೇಶ್ ಕ್ರೀಡಾ ಪಟು ಆಯ್ಕೆಯಾಗಿರುತ್ತಾರೆ

