ಚಳ್ಳಕೆರೆ :
ಕಲಿಕೆ ಹಬ್ಬ ಶಾಲೆ ಮಕ್ಕಳಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ (ಬಿ.ಆರ್ ಸಿ )ಎಚ್ ಬಿ.
ಮಂಜುನಾಥ ಬಾಬು ರೆಡ್ಡಿ ಹೇಳಿದರು..
ನಗರದ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆಯಲ್ಲಿ ಇಂದು ನಡೆದ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಗಳ ಕಚೇರಿ ,ಚಳ್ಳಕೆರೆ ಸಮೂಹ ಸಂಪನ್ಮೂಲ ಕೇಂದ್ರ ಚಳ್ಳಕೆರೆ ದಕ್ಷಿಣ ಇವರ ವತಿಯಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದ ಪೋಸ್ಟ್ ರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿ. ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಕ್ಕಳನ್ನು ಆಸಕ್ತಿ ಹೆಚ್ಚಿಸಲು ಕಲಿಕಾ ಹಬ್ಬ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗುತ್ತದೆ ..
ಕಲಿಕೆ ಹಬ್ಬದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಟಗಳು, ಚಟುವಟಿಕೆಗಳು ಇರುತ್ತವೆ, ಇದರಿಂದ ಮಕ್ಕಳಿಗೆ ಕಲಿಯೋದ್ರಲ್ಲಿ ಆಸಕ್ತಿ ಸಹ ಹೆಚ್ಚುತ್ತೆ.ಕಲಿಕೆ ಹಬ್ಬದಲ್ಲಿ ಮಕ್ಕಳು ಸೃಜನಶೀಲವಾಗಿ ವಿಚಾರ ಮಾಡೋಕೆ ಮುಕ್ತವಾಗಿ ಅವಕಾಶ ಸಿಗುತ್ತದೆ. ಕಲಿಕೆ ಹಬ್ಬದಲ್ಲಿ ಮಕ್ಕಳು ಒಟ್ಟಾಗಿ ಕೆಲಸ ಮಾಡೋಕೆ ಕಲಿಯುತ್ತಾರೆ, ಇದರಿಂದಾಗಿ ಸ್ನೇಹ ಸಾಮರಸ್ಯ ಬೆಳೆಯುತ್ತೆ.ಇದರ ಜತೆಗೆ ಪಾಠಗಳನ್ನ ಆಟದ ಮೂಲಕ ಹೇಳಿಕೊಡೋದ್ರಿಂದ ಮಕ್ಕಳಿಗೆ ಸುಲಭವಾಗಿ ಇದು ಅರ್ಥವಾಗುತ್ತದೆ ಕಲಿಕಾ ಹಬ್ಬದಲ್ಲಿ ಆಟಗಳ- ಚಿತ್ರಕಲೆ, ಕರಕುಶಲ ಕಲೆ ನಾಟಕ, ವಿಜ್ಞಾನದ ಪ್ರಯೋಗಗಳ ಕತೆ ಕವನ, ಹಾಡು ಸ್ಪರ್ಧೆಗಳು ಭಾಗವಹಿಸಲು ಸಹಕಾರಿಯಾಗಲಿದೆ ಕಲಿಕಾ ಹಬ್ಬದಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡು . ತಮ್ಮಲ್ಲಿ ಅಡಗಿದ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ.
ಶಿಕ್ಷಕರು ಸಹ ಮಕ್ಕಳನ್ನ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿ ಕರೆತಂದು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದರು .
ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಸಿಟಿ.ವಿರೇಶ ಮಾತನಾಡಿ.
ಶಾಲಾ ಮಟ್ಟದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಮತ್ತು ವಿದ್ಯಾರ್ಥಿಗಳನ್ನು ಅಡಗಿರುವ ಕಲೆಯನ್ನು ಪ್ರದರ್ಶಿಸಲು ಈ ಕಲಿಕಾ ಹಬ್ಬ ಉತ್ತಮ ಕಾರ್ಯವಾಗಿದೆ . ಮಕ್ಕಳಲ್ಲಿನ ಕಲಿಕೆ ಉತ್ಸಾಹ ಇಚ್ಚಲು ಮತ್ತು ಅವರ ಸೃಜನಶೀಲತೆಯನ್ನು ಮರೆದಿಡಲು ಆಯೋಜಿಸಲಾಗುವುದು ಶೈಕ್ಷಣಿಕ ಉತ್ಸವ ಈ ಹಬ್ಬದಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಹಲವಾರು ರೀತಿಯ ಚಟುವಟಿಕೆಗಳನ್ನು ಭಾಗವಹಿಸುತ್ತಾರೆ. ಮಕ್ಕಳು ಪಠ್ಯ ವಿಷಯಗಳ ಆಧಾರದ ಮೇಲೆ ಚಿತ್ರಗಳನ್ನು ರಚನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಮಾಡಿರುವ ಸಣ್ಣ ವಿಜ್ಞಾನ ಪ್ರಯೋಗಗಳು ಪರಿಸರ ಸಂಬಂಧಪಟ್ಟ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರು ಮಾಡುತ್ತಾರೆ. ಕಲಿಕಾ ಹಬ್ಬದ ಚಟುವಟಿಕೆಗಳಿಗೆ ಬೇಕಾದ ವಸ್ತುಗಳ ಒದಗಿಸಿ ಅವರನ್ನು ಪ್ರತಿಭಾವಂತರನ್ನಾಗಿ ಮಾಡಲು ಎಲ್ಲಾ ಶಿಕ್ಷಕರ ಆಧ್ಯಾ ಕರ್ತವ್ಯವಾಗಿದೆ ಎಂದರು…
ಈ ಕಾರ್ಯಕ್ರದಲ್ಲಿ ಇಸಿಓ ದೇವೆಂದ್ರಪ್ಪ,ಮಲ್ಲಿಕಾಲರ್ಜನ್, ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ್, ಪ್ರಸನ್ನ, ಮಲ್ಲೇಶಪ್ಪ, ನಾಗರಾಜ್ ,ಮೂಡ್ಲಪ್ಪ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ. ಪದ್ಮಾವತಮ್ಮ ಗೌರಮ್ಮ ಹೇಮರಾಜ್, ಶಿಕ್ಷಕಿಯರಾದ .ಬಿಎಸ್ ಯೋಗೋಶ್ವರಿ, ಶ್ವೇತಾ ,ಕೌಶಲ್ಯ, ಹಾಗೂ ನಾಲ್ಕು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಮತ್ತು ಪೋಷಕರು ಇದ್ದರು..

