ಚಳ್ಳಕೆರೆ : ತಾಲೂಕಿನ ಐತಿಹಾಸಿಕ
ಶ್ರೀ” ಕ್ಯಾತೇದೇವರ 13 ಗುಡಿಕಟ್ಟಿನ
ಪ್ರತೀಕವಾದ ಪೂಜಾಮರ ಸಂಪ್ರದಾಯದ
ಪೂಜೆ’ ಮಹೋತ್ಸವ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರೆವೆರಿತು.
ನಗರದ ಪಾವಗಡ ರಸ್ತೆಯಲ್ಲಿ ಇರುವ ಹತ್ತಿಮರದ ವಿಶೇಷ ಪೂಜಾ ವಿಧಾನಗಳ ಮೂಲಕ ಸಾವಿರಾರು ಭಕ್ತರ ಕಣ್ ತುಂಬಿಕೊಂಡಿರು.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಸಂಪ್ರದಾಯದ ಪೂಜಾ ವಿಧಾನಗಳನ್ನು ನೆರೆವೆರಿಸಿ ಮಾತನಾಡಿದ ಅವರು ಈ ಭಾಗದ ಆರಾಧ್ಯ ದೈವ ಶ್ರೀ ಕ್ಯಾತೇದೇವರ ಭಕ್ತರ ನಂಬಿಕೆಯ ಮೂಲವಾಗಿದ್ದಾರೆ, ಅದರಂತೆ ಕ್ಯಾತೆದೇವರ ಭಕ್ತರು ಪ್ರಾರಂಭದಿಂದಲೂ ತಮ್ಮ ಭಕ್ತಿ ಭಾವವನ್ನು ಪಡಿಮುಡಿಸಿದ್ದಾರೆ..ಎಂದರು.
ಇಡೀ ನಗರದಲ್ಲಿ ಹಬ್ಬದವಾತವರಣ ಮನೆಮಾಡಿದೆ. ಈ ಆಚರಣೆ ಕೇವಲ ಒಂದುಧಾರ್ಮಿಕ ವಿಧಿಯಲ್ಲ, ಬದಲಿಗೆ ಮನುಷ್ಯ, ಮತ್ತು ದೈವತ್ವದ ನಡುವಿನ
ಪ್ರಕೃತಿ ಅವಿನಾಭಾವ ಸಂಬಂಧವನ್ನು ಶ್ರೀ
ಸಾರುವ ಸಾಕ್ಷಿಪ್ರಜ್ಞೆಯಾಗಿದೆ. ಕ್ಯಾತಲಿಂಗೇಶ್ವರ ಕಾಡುಗೊಲ್ಲರ ಆರಾಧ್ಯದೈವ ಪ್ರಕೃತಿಯ ಮಡಿಲಲ್ಲಿ ದೇವರ ವಾಸ ಈ ವಿಶೇಷ ಆಚರಣೆಯ ಹಿನ್ನೆಲೆ ಅತ್ಯಂತ ಮತ್ತು ಅರ್ಥಪೂರ್ಣವಾಗಿದೆ.
ರೋಚಕ ಸಾಮಾನ್ಯವಾಗಿ ದೇವರು ಗರ್ಭಗುಡಿಯಲ್ಲಿ ನೆಲೆಸುತ್ತಾನೆ ಎಂಬುದು ವಾಡಿಕೆಯಾಗಿದೆ ಎಂದು ಶ್ರೀ ಯಾದವನಂದ ಸ್ವಾಮೀಜೀ ಹೇಳಿದರು.
ಇದೇ ಸಂಧರ್ಭದಲ್ಲಿ ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಟಿ.ಮಲ್ಲಿಕಾರ್ಜುನ, ಡಿ.ಉಪ್ಪಾರಟ್ಟಿ ಕ್ಯಾತಣ್ಣ,ಇತರ ಅನೇಕ ಮುಖಂಡರು, ಸಾರ್ವಜನಿಕರು ಭಕ್ತರು ಆಗಮಿಸಿದ್ದರು.

