ಚಳ್ಳಕೆರೆ :
ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ತಿನ್ನುವ ಆಹಾರ ಪ್ರತಿಯೊಂದರಲ್ಲಿ ಕಲಬೇರಿಕೆಯಿಂದ ಕೂಡಿದೆ ಇಂದು ತಿನ್ನುವ ಆಹಾರ ವಿಷಪೂರಿತವಾಗಿದೆ ಆದ್ದರಿಂದ ಗುಣಮಟ್ಟದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು
ಅವರು ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಾರ್ಯಕ್ರಮದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ರೈತ ಬೆಳೆದ ಸರಿಯಾದ ಬೆಲೆಯಿಲ್ಲದೆ ಇಂದು ರೈತ ಕಂಗಲಾಗಿದ್ದಾನೆ, ಮನುಷ್ಯ ನ ಸ್ವಾರ್ಥಕ್ಕೆ ಕಲಬೇರಿಕೆಯ ಮುಖ್ಯ ಕಾರಣವಾಗಿದೆ, ಆದ್ದರಿಂದ ಬೆಳೆಗಳಿಗೆ ಹಾಗೂ ತರಕಾರಿ ಬೆಳೆಗಳನ್ನು ಗುಣಮಟ್ಟದ ರೀತಿಯಲ್ಲಿ ಬೆಳೆಯುವುದು ಅನಿವಾರ್ಯ, ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ ಈಗೇ ಆಹಾರ ಎಲ್ಲದಲ್ಲಿ ವಿಷಪೂರಿತವಾಗಿ ಮನುಷ್ಯ ಮಾರಕ ರೋಗಗಳಿಗೆ ತುತ್ತಾಗಬೇಕಿದೆ ಆದ್ದರಿಂದ ಗುಣಮಟ್ಟದ ಆಹಾರ ಪದ್ದತಿ ಮೂಲಕ ಉತ್ತಮ ಆರೋಗ್ಯ ಕಾಳಜಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಹಾರ ಸಂರಕ್ಷತೆ ಹಾಗೂ ಸುರಕ್ಷತಾ ಕೇಂದ್ರ ರಾಜ್ಯ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ, ಕುಮಾರಿ ಪ್ರೀತಿ , ಸಂತೋಷ್, ಗೀತಾ ಕುಮಾರಿ,ಮತ್ತು ಉಪವಿಭಾಗಾಧಿಕಾರಿಗಳಾದ ಎಂ. ಪುಟ್ಟರಾಜು,ಮಾರ್ಗವಿಸ್ತರಣಾಧಿಕಾರಿಗಳಾದ ಎಸ್.ನಯಾಜ್ ಬೇಗ್. ಎಸ್.ಜಿ.ಕೃಷ್ಣಕುಮಾರ್,ಮೂರು ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಚಳ್ಳಕೆರೆ ಉಪ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

