ಚಿತ್ರದುರ್ಗ :
ವೀಕ್ಷೀತ್ ಭಾರತ್ GRAMG ಲ್ 2025 ನ್ನು ಜಾಲಿಮಾಡದಂತೆ ರಾಷ್ಟ್ರಪತಿಯವರಿಗೆ
ಪತ್ರ ಬರೆಯಲು ಹಾಗೂ MGNREG ಕಾನೂನು ಉಳಸುವಂತೆ ಹಕ್ಕೋತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ನ ಕಾರ್ಯಕರ್ತರು ಸಂಸದ ಗೋವಿಂದ ಎಂ.ಕಾರಜೋಳ ರವರಿಗೆ ಮನವಿ ಸಲ್ಲಿಸಿದರು.

ಅವರು ನಗರದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಗ್ರಾಕೂಸ್ ನ ಸದಸ್ಯರು ಮನವಿ ಮಾಡಿಕೊಂಡರು.

ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತ್ರಿ ಯೋಜನೆಯ( ಕಾನೂನು) ಕೂಲಿ ಕಾರ್ಮಿಕರಾದ ನಾವು ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಾದ
ತಮಗೆ ಈ ಮೂಲಕ ಹಣೋತ್ತಾಯಸುವುದೇನೆಂದರೆ “ಉದ್ಯೋಗ ಖಾತ್ರಿ” ಗ್ರಾಮಿಣ ಭಾಗದ ಕೂಲ
ಆಶ್ರಿತ ಕುಟುಂಬಗಳಿಗೆ ಜೀವನಾಡಿಯಾಗಿದ್ದು, 15 ವರ್ಷಗಳ ಸುಧೀರ್ಘಕಾಲ ಬದುಕು ಕಟ್ಟಿಕೊಳ್ಳಲು
ಅಂದರೆ ಆರೋಗ್ಯ ಶಿಕ್ಷಣ ಆರ್ಥಿಕ ಸ್ವಾವಲಂಬಿ ಬದುಕಿಗೆ ಆಶ್ರಯವಾಗಿದೆ. ಇಂತಹ ಕಾನೂನು
ಭಾರತದೇಶ ಬಿಟ್ಟರೇ ಬೇರೆ ಯಾವುದೇ ದೇಶದಲ್ಲಿ ಜಾರಿಯಲ್ಲಿಲ್ಲ-ಭಾರತದಲ್ಲಿ ಕೋಟ್ಯಂತರ
ಕುಟುಂಬಗಳು ಹಾಗೆಯೇ ಕರ್ನಾಟಕದಲ್ಲಿ ಕೋಟ್ಯಾಂತರ ಕುಟುಂಬಗಳ ಕಾರ್ಮಿಕರು ದುಡಿದು-
ಕೂಲ ಪಡೆದು ಜೀವನ ನಿರ್ವಹಣೆ ಮಾಡಿಕೊಂಡು ಮುಖ್ಯವಾಗಿ ಗ್ರಾಮೀಣ ಪ್ರದೇಶ ಒಟ್ಟು -ವಲಸೆ
ಹೋಗದಂತೆ ಬದುಕುತ್ತಿದ್ದಾರೆ. ಈಕಾನೂನಿಲ್ಲ ಲೋಪ-ದೋಷಗಳಿದ್ದರೆ ತಾಂತ್ರಿಕವಾಗಿ ಸರಿಪಡಿಸಲು
ಆದೇಶ ಮಾಡಬಹುದಿತ್ತು. ಆದರೆ ಎಲ್ಲಾ ರೀತಿಯಿಂದ ಹೊಸದಾಗಿ ಜಾಲಿಯಾಗಲಿರುವ ಜಾಲಿಮಾಡಲು
ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ವೀಕ್ಷೀತ್ ಭಾರತ್-GRAMG, ಅಲ್ 2025 ಸಂಪೂರ್ಣವಾಗಿ
ಕಾರ್ಮಿಕರಿಗೆ 125 ದಿನಗಳ ಕೆಲಸದ ಖಾತರಿ ಇಲ್ಲದಂತೆ ಮಾಡುತ್ತದೆ. MGNREG ಕಾನೂನಿನ
ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ಗ್ರಾಮೀಣ ಭಾಗದ-ಕಾರ್ಮಿಕರು ರೈತರು -ಗ್ರಾಮಸಭೆಗಳ
ಮೂಲಕ ಗ್ರಾಮಗಳಿಗೆ ಬೇಕಾದ ಉತ್ತುಮ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಿ
ಆಸ್ತಿಸೃಜನ ಮಾಡಿಕೊಳ್ಳುತ್ತಿದ್ದರು. ಆದರೆ ಹೊಸದಾಗಿ ತಯಾರಿಸಲಾದ ಅಲ್‌ನಲ್ಲಿ ಇದಕ್ಕೆ
ಅವಕಾಶವಿಲ್ಲದಿರುವುದು ಗ್ರಾಮಸಭೆಯ ಹಕ್ಕನ್ನು ಉಲ್ಲಂಘನೆ ಮಾಡಿರುವುದು ಕಂಡುಬರುತ್ತದೆ.

ಹಣಕಾಸಿನ ಜವಾಬ್ದಾರಿಗೆ ಸಂಬಂಧಪಟ್ಟಂತೆ ನೋಡುವುದಾದರೆ ಕೇಂದ್ರದ ಪಾಲು
(60-ಭಾಗ 60%) ರಾಜ್ಯ ಸರ್ಕಾರಗಳ ಪಾಲು 40-ಭಾಗ (40) ಹಂಚಿಕೆ ಮಾಡಿದ್ದು, ಇಷ್ಟು
ಮೊತ್ತದ ಹಣವನ್ನು ಹೊಂದಿಸಲು ಯಾವ ರಾಜ್ಯ ಸರ್ಕಾರಗಳಗೂ ಸಾಧ್ಯವಿಲ್ಲದ ಕಾರಣ ರಾಜ್ಯಗಳ
ತೆರಿಗೆಯ ಬಹುಪಾಲು -ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಹಣ ನೀಡಬೇಕಾದ
ಕೇಂದ್ರ ಸರ್ಕಾರ-ರಾಜ್ಯಗಳಿಗೆ ಭಾರ ಹಾಕಿದರೆ ದುಡಿಯುವ ಕೈಗಳಿಗೆ ಕೆಲಸ ಮತ್ತು ಕೂಲಿ ಸಿಗಲು
ಸಾಧ್ಯವೇ ಇಲ್ಲಎಂಬುದು ನಮ್ಮ ಪ್ರಕಾರ ಸತ್ಯವಾದ ಮಾತು, ನರೇಗಾ ಕಾರ್ಮಿಕರ ಒಪ್ಪಿಗೆ
ಪಡೆಯದೇ ಮೂರೇ ದಿನದಲ್ಲಿ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಧಾರವಾಗಿ ಜಾಬ್‌ ಕಾರ್ಡ್‌ದಾರರು ವರ್ಷವಿಡಿ ಕೆಲಸ ಮಾಡಲು MGNREG ಕಾನೂನಿನಲ್ಲಿ
ಅವಕಾಶವಿತ್ತು. ಹೊಸ ಬಿಲ್‌ನಲ್ಲಿ ಪೂರೈಕೆ ಆಧಾರಿತ ಮಾಡಿರುವುದು ತಾರತಮ್ಯದ ನೀತಿಯನ್ನು
ಹಾಗೂ ಉದ್ಯೋಗ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಖಾತಲಿ ಇಲ್ಲದಂತಾಗಿದೆ. ಹಾಗಾಗಿ ನಾವು
ಇದನ್ನು ನೇರವಾಗಿ, ಖಂಡಿಸುತ್ತೇವೆ ಮತ್ತು ಒಪ್ಪಿಕೊಳ್ಳುವುದಿಲ್ಲ. ಈ ಹಕ್ಕೋತ್ತಾಯವನ್ನು ಕೇಂದ್ರ
ಸರ್ಕಾರಕ್ಕೆ ತಿಳಿಸಿ ರಾಷ್ಟ್ರಪತಿಯವರಿಗೆ ಪತ್ರ ಬರೆದು ಈ ಬಿಲ್ಲನ್ನು ನಿರಾಕರಿಸಲು ರದ್ದುಪಡಿಸಲು,
ಹಿಂಪಡೆಯಲು ಸಹಿ ಹಾಕದಂತೆ ಒತ್ತಾಯಿಸಬೇಕೆಂದು ಹಕ್ಕೊತ್ತಾಯಿಸುತ್ತಿದ್ದೇವೆ ಎಂದರು.

ಇದೇ ಸಂಧರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ
ಕಾರ್ಯಕರ್ತರಾದ
ಮಂಜಮ್ಮ , ಪರಶುರಾಂಪುರ,
ಸಂಧ್ಯಾ ಸಿದ್ದೇಶನದುರ್ಗ,
ತೇಜಶ್ವರಿ ಚಿತ್ರದುರ್ಗ,
ಪರಮೇಶ್ ಬಿ ಜುಂಜರಗುಂಟೆ,
ತಿಪ್ಪೇಸ್ವಾಮಿ ಉಪ್ಪಾರಟ್ಟಿ,
ಹೇಮಂತ್ ಮೊನ್ನೆಕೋಟೆ ತಳಕು ಇತರರು ಇದ್ದರು.

About The Author

Namma Challakere Local News
error: Content is protected !!