ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಗ್ರಾ.ಪ.ಸದಸ್ಯೆ ಭವಾನಿಉಮೇಶ್ ಚಾಲನೆ

ಮಕ್ಕಳ ಭವಿಷ್ಯಕ್ಕೆ ಪೋಲಿಯೋ ಹನಿ ರಕ್ಷಾಕವಚವಿದಂತೆ


ಚಳ್ಳಕೆರೆ: ಮಕ್ಕಳು ಬಾಲ್ಯದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಲಿಯೋ ಹನಿ ರಕ್ಷಾಕವಚವಾಗಿದೆ ಎಂದು ಆಶಾ ಕಾರ್ಯಕರ್ತೆ ವಸಂತಮ್ಮ ಹೇಳಿದರು.

ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ,ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಅಂಗನವಾಡಿ ಸಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕಿ ಮಾತನಾಡಿದ ಅವರು ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ,ನೀವು ಐದು ವರ್ಷಗಳ ಒಳಗಿನ ಎಲ್ಲಾ ಮಗುವಿಗೆ ಹಾಕಿಸುವ ಎರಡು ಹನಿ‌ ಲಸಿಕೆ, ಅದರ ಭವಿಷ್ಯವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿದೆ ಎಂದರು.

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾ.ಪ.ಸದಸ್ಯೆ ಭವಾನಿಉಮೇಶ್ ಅವರು ಡಿಸೆಂಬರ್ 21 ರಿಂದ 24 ರ ವರೆಗೆ ಈ ಅಭಿಯಾನ ನಡೆಯಲಿದ್ದು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಐದು ವರ್ಷಗಳ ಒಳಗಿನ ಮಕ್ಕಳಿಗೆ ಪೋಲಿಯೊವನ್ನು ಹಾಕಿಸಿ ಪೋಲಿಯೋ ರೋಗದಿಂದ ತಡೆಗಟ್ಟುತ್ತದೆ. ಹಾಗೂ ಪೋಲಿಯೊ ಲಸಿಕೆಯನ್ನು ಹಲವು ಬಾರಿ ನೀಡುವುದರಿಂದ, ಅದು ಯಾವಾಗಲೂ ಮಗುವನ್ನು ಜೀವನಪರ್ಯಂತ ರಕ್ಷಿಸುತ್ತದೆ ಎಂದರು.

ಆಶಾ ಕಾರ್ಯಕರ್ತೆ ಗೌರಮ್ಮ ಮಾತನಾಡಿ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವರ್ಷಗಳ ಒಳಗಿನ ಮಕ್ಕಳ ಸಂಖ್ಯೆ 442 ಇದ್ದು ಇದರಲ್ಲಿ ಗೋಪನಹಳ್ಳಿ 225, ರೆಡ್ಡಿಹಳ್ಳಿ 146 , ಚಿಕ್ಕನಹಳ್ಳಿ 71, ಮಕ್ಕಳನ್ನು ಹೊಂದಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯಿಂದ ಗೋಪನಹಳ್ಳಿ ಗ್ರಾಮದ ಅಂಗನವಾಡಿ ಸಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಆರಂಭವಾಗಿದ್ದು, 10 ಗಂಟೆ ಸಮಯದ ವೇಳೆಗೆ 94 ಮಕ್ಕಳಿಗೆ ಪೂರ್ಣಗೊಂಡಿದೆ , ಸಂಜೆ ವೇಳೆಗೆ ಶೇಕಡಾ 100 ರಷ್ಟು ಮಾಡಲು ಎಲ್ಲ ಸಿಬ್ಬಂದಿಗಳು ಶ್ರಮ ವಹಿಸುವೆ ಎಂದರು.

ಬೆಳ್ಳಿಗೆಯಿಂದ ಐದು ವರ್ಷಗಳ ಒಳಗಿನ ಪೋಷಕರು ಬಾಣಂತಿರರು ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬಂದು ಲಸಿಕೆ ಹಾಕಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಭಾರತಮ್ಮ, ಶಾರದಮ್ಮ, ಲಕ್ಷ್ಮಿ, ಅಂಗನವಾಡಿ ಸಿಬ್ಬಂದಿಗಳಾದ, ತಿಪ್ಪಿರಮ್ಮ, ಲಕ್ಷ್ಮೀದೇವಿ, ಯಲ್ಲಮ್ಮ, ಶೃತಿ, ಶೈಲ, ಎನ್. ಆರ್. ಎಲ್. ಎಂ. ಸಿಬ್ಬಂದಿ ಚೈತ್ರ ಹರ್ಪಿತ ಇದ್ದರು.

About The Author

Namma Challakere Local News
error: Content is protected !!