“ಜನರ ಕಲ್ಯಾಣಕ್ಕಾಗಿ ಭಗವಂತ ಮಾನವ ರೂಪ ಧರಿಸಿ ಬರುತ್ತಾನೆ”:- ಶ್ರೀಮತಿ.ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ. ಚಳ್ಳಕೆರೆ:-ಜನರ ಕಲ್ಯಾಣಕ್ಕಾಗಿ ಭಗವಂತ ಮಾನವ ರೂಪ ಧರಿಸಿ ಬರುತ್ತಾನೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨”ರ ಗ್ರಂಥ ಪಾರಾಯಣ ಮಾಡುತ್ತ “ವೈದ್ಯನಾಗಿ ಬಂದ ಶಿಷ್ಯನಾಗಿ ನಿಂದ” ಎಂಬ ಅಧ್ಯಾಯವನ್ನು ಓದಿ ವಿವರಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಮಂಜುಳಾ ಉಮೇಶ್, ಸುಜಾತಾ,ವೆಂಕಟಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ, ಪುಷ್ಪಲತಾ,ಜಿ ಯಶೋಧಾ ಪ್ರಕಾಶ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!