ತಪ್ಪಗೊಂಡನಹಳ್ಳಿಯಲ್ಲು
ಅದ್ಧೂರಿಯ ಶ್ರೀ ಆಂಜನೇಯಸ್ವಾಮಿ ರಥೋತ್ಸವ.

ಚಳ್ಳಕೆತೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರಗಿತು.

ತಪ್ಪಗೊಂಡನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೀಪಾರಾಧನೆ, ಪಾದಗಟ್ಟೆವರಿಗೂ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಗ್ಗೆ ಕಳಸ ಪೂಜೆ ನೆರವೇರಿಸಿದ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂವುಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ಸ್ವಾಮಿ ಆಂಜನೇಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತಂದು ರಥೋತ್ಸವದಲ್ಲಿ ಕೂರಿಸಿ ಪ್ರತಿಷ್ಠಪಿಸಲಾಯಿತು.

ಶ್ರೀ ಆಂಜನೇಯಸ್ವಾಮಿ
ರಥೋತ್ಸವಕ್ಕೆ ಮಹಾ ಮಂಗಳಾರತಿ ನಂತರ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

About The Author

Namma Challakere Local News
error: Content is protected !!