“ರಾಮಕೃಷ್ಣ ಗತಪ್ರಾಣಾ ಶ್ರೀಮಾತೆ ಶಾರದಾದೇವಿ”:- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ರಾಮಕೃಷ್ಣ ಗತಪ್ರಾಣರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ಶಿವನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತ್ಯುತ್ಸವ”ದ ಪ್ರಯುಕ್ತ
ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು “ಗುರು ದೈವ ಜನನಿ ಶ್ರೀಮಾತೆ” ಎಂಬ ವಿಷಯವಾಗಿ ಆಶೀರ್ವಚನ ನೀಡಿದರು. ಧನುರ್ಮಾಸದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ವಿಶೇಷ ಭಜನೆ ಮತ್ತು ಆರತಿ,ಅನ್ನಪ್ರಸಾದ ವಿನಿಯೋಗ ನಡೆಯಿತು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಂ ಗೀತಾ ನಾಗರಾಜ್ , ಗೀತಾ ವೆಂಕಟೇಶರೆಡ್ಡಿ, ಜಿ ಯಶೋಧಾ ಪ್ರಕಾಶ್, ಶಾಂತಮ್ಮ, ವಿಶಾಲಾಕ್ಷಿ,ಶೈಲಜಾ, ಕೃಷ್ಣವೇಣಿ , ಸಂಗೀತ, ನಾಗರತ್ನಮ್ಮ, ಲೀಲಾವತಿ,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಶಾರದಾಮ್ಮ, ವೀರಮ್ಮ, ಗೀತಾಲಕ್ಷ್ಮೀ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ರಶ್ಮಿ ವಸಂತ, ಯತೀಶ್ ಎಂ ಸಿದ್ದಾಪುರ, ದ್ರಾಕ್ಷಾಯಣಿ,ಪಂಕಜ, ಸೌಮ್ಯ, ವೆಂಕಟಲಕ್ಷ್ಮೀ, ಮಂಜುಳಾ, ಜಯಮ್ಮ, ಜಯಶೀಲಮ್ಮ, ಭಾಗ್ಯಲಕ್ಷ್ಮೀ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!