ಚಿತ್ರದುರ್ಗ: ಶರಣರ ವಿರುದ್ಧ ಹೈಕೋರ್ಟ್
ಮೆಟ್ಟಿಲೇರಿದ ಸಂತ್ರಸ್ತೆ
ಚಿತ್ರದುರ್ಗದ ಮುರುಘಾ ಶರಣರು ಎದುರಿಸುತ್ತಿದ್ದ ಲೈಂಗಿಕ
ಕಿರುಕುಳದ ಪೋಕೋ ಪ್ರಕರಣಗಳನ್ನು ಚಿತ್ರದುರ್ಗ
ನ್ಯಾಯಾಲಯವು ವಜಾಗೊಳಿಸಿ, ಮುರುಘಾ ಶರಣರು ಮತ್ತು
ಇಬ್ಬರನ್ನು ಖುಲಾಸೆಗೊಳಿಸಿ ಕಳೆದ 26 ರಂದು ತೀರ್ಪು ನೀಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆಯೋರ್ವಳು ಹೈಕೋರ್ಟ್
ಮೆಟ್ಟಿಲೇರಿದ್ದಾಳೆ. ಕೆಳ ಹಂತದ ನ್ಯಾಯಾಲಯದಲ್ಲಿ ತನಗೆ
ಅನ್ಯಾಯವಾಗಿದೆ, ತನಗೆ ನ್ಯಾಯ ಕೊಡಿಸಬೇಕು ಮತ್ತು
ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಬೇಕೆಂದು ಹೈಕೋರ್ಟ್‌ಗೆ ಅರ್ಜಿ
ಸಲ್ಲಿಸಿ ಮನವಿ ಮಾಡಿದ್ದಾಳೆ.

