ತಳಕು:- ಸಮೀಪದ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಕಂಬೂದಿ ಗ್ರಾಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಸಸಿ ಮರದಿಂದ ಬುಕ್ಕಂಬೂದಿ ರಸ್ತೆ ಸಂಪರ್ಕಿಸುವ ಒಂದುವರೆ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು,ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಉತ್ತಮ ಕೆಲಸ ಆಗಬೇಕು ಎಂದು ಸಂಬಂಧಪಟ್ಟ ಗುತ್ತಿಗೆದಾರರು, ಎಂಜಿನಿಯರ್‌ಗಳಿಗೆ ಸೂಚಿಸಿದರು.ಗ್ರಾಮೀಣ ಭಾಗದಲ್ಲಿ ಇಷ್ಟು ದಿನ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಇನ್ನು ಹಾಗಾಗದಂತೆ ಕ್ರಮವಹಿಸಲಾಗುವುದು. ಆದಷ್ಟು ಬೇಗ ಸಂಚಾರ ಯೋಗ್ಯ ರಸ್ತೆಗಳನ್ನಾಗಿ ಮಾಡಲಾಗುವುದು.

ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು. ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತಾಪಿ ವರ್ಗದವರಿಗೆ. ವಿದ್ಯಾಭ್ಯಾಸಕ್ಕಾಗಿ ಊರಿಂದ ಊರಿಗೆ ಹೋಗುವ ವಿದ್ಯಾರ್ಥಿಗಳಿಗೆ. ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ಹಾಗೂ ನಾಗರಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಕೆ ಡಿ ಪಿ ಸದಸ್ಯ ವಿಶ್ವನಾಥ್ ರೆಡ್ಡಿ, ಯಾದಲಗಟ್ಟೆ ಪಾಲಯ್ಯ, ಊರಿನ ಮುಖಂಡ ತಿಪ್ಪೇಸ್ವಾಮಿ, ಎಸ್‌ಬಿ ಓಬಯ್ಯ, ಎಕೆ ಗಿಡ್ಡಯ್ಯ, ಗೌರಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯಶ್ರೀ ಪ್ರಕಾಶ್, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಎಸ್ ಎಂ ಬೊಮ್ಮಯ್ಯ, ಡಿ.ಕೆ. ಬೊಮ್ಮಯ್ಯ, ಶಾರದಮ್ಮ, ಶಂಕ್ರಮ್ಮ, ಪಿಡಿಒ ಗುಂಡಪ್ಪ, ಗುತ್ತಿಗೆದಾರ ಎಸ್‌.ಪಿ. ಪ್ರಕಾಶ್, ತಳಕು ಪೊಲೀಸ್ ಠಾಣೆಯ ಪಿಎಸ್ಐ ಕೆ.ಶಿವಕುಮಾರ್, ಜೋಗಿಹಟ್ಟಿ ಎಸ್ ವೆಂಕಟೇಶ್, ಹಾಗೂ ಸಿಬ್ಬಂದಿಗಳು ಸೇರಿದಂತೆ ಬುಕ್ಕಂಬೂದಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!