filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ

ಚಳ್ಳಕೆರೆ :
ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ
ಹಾಗೂ ಸರಕು ಸಾಗಣಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಶ್ರಮಜೀವಿಗಳಾದ ಎಪಿಎಂಸಿ, ಮಿಲ್-ಗೋಡನ್
ವೇರಹೌಸ್, ನಗರ ಗ್ರಾಮೀಣ ಬಜಾರ್, ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಬಂದರುಗಳಲ್ಲಿ ಲೋಡಿಂಗ್
ಅನ್ ಲೋಡಿಂಗ್ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರ ಬದುಕಿನ ಪ್ರಮುಖ ಪ್ರಶ್ನೆಗಳಿಗಾಗಿ, ಪ್ರಮುಖ
ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕಾರ್ಯದರ್ಶಿ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ಎಪಿಎಂಸಿ ಮಾರುಕಟ್ಟೆಯಿಂದ ತಾಲೂಕು ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ
ಕರ್ನಾಟಕ ರಾಜ್ಯ
ಮಂಡಳಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ
85ಕ್ಕೂ ಹೆಚ್ಚು ವಲಯದ ಅಸಂಘಟಿತ ಕಾರ್ಮಿಕರಿಗೆ ಕೇವಲ ಅಪಘಾತ ಸಂಬಂಧಿಸಿದ ಕೆಲ ಪರಿಹಾರ
ನೀಡುವ ಯೋಜನೆಗಳನ್ನು ಜಾರಿಮಾಡಲಾಗುತ್ತಿದೆ. ಆದರೇ ಸರಕಾರ ನಿರ್ಧಿಷ್ಟವಾಗಿ ಯಾವುದೇ ಹಣಕಾಸಿನ
ನೇರವು ನೀಡಿಲ್ಲ. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ
ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ-2024ರ ಅಡಿ ರಚಿಸಲಾಗುತ್ತಿರುವ ಮಂಡಳಿಯಿಂದ ಸಾರಿಗೆ ಸಂಬಂಧಿತ
ಲೋಡಿಂಗ್ ಅನ್ ಲೋಡಿಂಗ್ ಹಮಾಲಿ ಕಾರ್ಮಿಕರನ್ನು ಒಳಗೊಂಡು ವಿವಿದ ಸಾರಿಗೆ ಕ್ಷೇತ್ರದ
ಕಾರ್ಮಿಕರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗುವುದು ಸ್ವಾಗತಾರ್ಹವಾಗಿದೆ.

ಈ ಮಂಡಳಿಯಡಿ ಹಮಾಲಿ
ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಬೇಕು. ಒಟ್ಟಾರೇ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ
ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಹಣಕಾಸು
ಸಂಪನ್ಮೂಲಗಳನ್ನು ಕ್ರೋಢಿಕರಿಸುವ ಯೋಜನೆಯನ್ನು ರೂಪಿಸಿ ಸಮಗ್ರ ಸಾಮಾಜಿಕ ಭದ್ರತೆಯನ್ನು
ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇನ್ನೊಂದಡೆ ಎಪಿಎಂಸಿಯಲ್ಲಿ ಶ್ರಮಿಕರ ಪರಿಹಾರದಡಿ ಮರಣ
ಪರಿಹಾರ ರೂ. 5ಲಕ್ಷ ರೂ ನೀಡಲು ತಿರ್ಮಾನಿಸಲಾಗಿದ್ದು ಸ್ವಾಗತಾರ್ಹವಾಗಿದೆ. ಎಪಿಎಂಸಿಯಲ್ಲಿ
ನಿವೃತ್ತರಾಗುವವರಿಗೆ ಕನಿಷ್ಟ ರೂ. 01 ಲಕ್ಷ ನಿವೃತ್ತಿ ಪರಿಹಾರ ಅಥವಾ ಇಡಿಗಂಟು ನೀಡಬೇಕು.

ಆದರೇ ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ, ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು
ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಬದುಕಿರುವಾಗ ಸಹಾಯವಾಗುವಂತ ಸಾಮಾಜಿಕ ಭದ್ರತಾ
ಸೌಲಭ್ಯಗಳ ಅಗತ್ಯತೆ ಇದೆ ಎನ್ನುವುದನ್ನು ಸರಕಾರ ಗಮನಿಸಬೇಕು.

ಈ ಹಿನ್ನಲೆಯಲ್ಲಿ ಕೆಳಕಂಡ ಹಮಾಲಿ ಕಾರ್ಮಿಕರ
ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿ ಈ ಮನವಿ
ಸಲ್ಲಿಸಲಾಗಿದೆ. ಶ್ರಮಜೀವಿಗಳ ಬೇಡಿಕೆಗಳನ್ನು ಈಡೇರಿಸಲಿ ಸರಕಾರ
ವಿನಂತಿಸುತ್ತೇವೆ.

ಬೇಡಿಕೆಗಳು:
ಮುಂದಾಗಬೇಕೆಂದು ಈ
ಮೂಲಕ

  1. ರಾಜ್ಯದ ಲೋಡಿಂಗ್ ಅನ್ ಲೋಡಿಂಗ್ ಹಮಾಲಿ ಕಾರ್ಮಿಕರಿಗೆ ಮಹಾರಾಷ್ಟಾ, ಕೇರಳ ಮಾದರಿಯಲ್ಲಿ
    ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು.
  2. ಗುರುತಿಸಲಾದ ಅಸಂಘಟಿತ ಕಾರ್ಮಿಕರಿಗೆ ಜಾರಿಮಾಡಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ರೂ, 01
    ಲಕ್ಷ ರೂಗಳ ಪರಿಹಾರ ನೀಡಬೇಕು ಹಾಗೂ ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ರೂ. 25 ಸಾವಿರಕ್ಕೆ
    ಹೆಚ್ಚಿಸಬೇಕು.
  3. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ಅಸಂಘಟಿತ ಕಾರ್ಮಿಕರ
    ಭವಿಷ್ಯನಿಧಿಯೋಜನೆ” (ಪಶ್ಚಿಮ ಬಂಗಾಲ ಮಾದರಿ) ಜಾರಿಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆಯನ್ನು
    ಜಾರಿಮಾಡಬೇಕು.

    ಕಾಯಕ ನಿಧಿ” ಯೋಜನೆ ಬಡ ಹಮಾಲಿ
  4. ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ
    ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಸರಕಾರದಿಂದ ಹಾಗೂ ಹಿಂದಿನಂತೆ ಎಪಿಎಂಸಿ ಸಮಿತಿಗಳಿಂದ
    ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರಿಸಬೇಕು ಹಾಗೂ 60
    ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಟ ರೂ, 1,00,000-00(ಒಂದು ಲಕ್ಷ) ನಿವೃತ್ತಿ ಪರಿಹಾರ
    (ಗ್ರಾಚೂಟ) ಅಥವಾ ಇಡಿಗಂಟು ನೀಡಬೇಕು. ಪ್ರತಿ ವರ್ಷ 2 ಜೋತೆ ಸಮವಸ್ತ್ರ ನೀಡಬೇಕು.
  5. ಮಿಲ್-ಗೋಡೌನ್-ವೇರಹೌಸ್‌ಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ
    ಕಾನೂನುಗಳು ಜಾರಿಯಾಗುವಂತೆ ಕ್ರಮವಹಿಸಬೇಕು. ಸರಕಾರ ಲೋಡಿಂಗ್ ಅನ್ ಲೋಡಿಂಗ್ ಉದ್ದಿಮೆಗೆ ಕನಿಷ್ಟ
    ವೇತನ ಜಾರಿಮಾಡಿ ಹಮಾಲಿ ಕೂಲಿ ದರಗಳನ್ನು ನಿಗಧಿಗೊಳಿಸಲಾಗಿದ್ದು ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ
    ಕನಿಷ್ಟ ವೇತನ ಜಾರಿಯಾಗುವಂತೆ ಮುತವರ್ಜಿವಹಿಸಬೇಕು.
    6.
    ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ ಕೇಂದ್ರ ಸರಕಾರದ ವಿವಿಧ ವಸತಿ ಯೋಜನೆಯನ್ನು
    ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು
  6. ಕೇಂದ್ರ ಸರಕಾರ ಇ-ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು
    ಜಾರಿಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ
ಅಧ್ಯಕ್ಷರಾದ ಟಿ.ನಿಂಗಣ್ಣ,
ಖಜಾಂಚಿ ಹೆಚ್.ಓ.ನಾಗರಾಜ್,
ಪ|| ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ,
ದುರ್ಗಾವಾರ ಬೋರಯ್ಯ, ಎಸ್‌.ರಾಜಣ್ಣ, ಈ. ನಾಗರಾಜ್, ಬಿ.ಚನ್ನಕೇಶವ, ಕೆ.ನಾಗರಾಜ್, ಕೆ.ಬಿ.ಜಯಣ್ಣ, ಕೆ.ಪ್ರಭು,
ಪಿ.ಸತೀಶ್, ಪಿ.ನಾಗೇಶ್, ಎಸ್.ಶಿವಣ್ಣ, ಚನ್ನಕೇಶ್ವಮೂರ್ತಿ.ಎಸ್, ಬಿ.ವೆಂಕಟೇಶ, ಗ್ರಾಮಾಂತರ, ಕಾಟಯ್ಯ ತಳಕು,
ಚಿನ್ನಮಲ್ಲಯ್ಯ ಮಲ್ಲೂರಹಳ್ಳಿ, ಮಂಜಣ್ಣ ಹಿರೆಹಳ್ಳಿ, ನಿಂಗಯ್ಯ ಬುಕ್ಕಂಬೂದಿ, ರಾಜಣ್ಣ ದೇವರೆಡ್ಡಿಹಳ್ಳಿ ಮುಖಂಡರಗಳು ಇದ್ದರು..

About The Author

Namma Challakere Local News
error: Content is protected !!