ಚಿತ್ರದುರ್ಗ: ಬಿಡುಗಡೆಗೂ ಮುನ್ನ ಕೋಟೆ ನಾಡಲ್ಲಿ
ಡೆವಿಲ್ ಅಬ್ಬರ
ನಟ ದರ್ಶನ್ ಅಭಿನಯದ ‘ಡೇವಿಲ್’ ಸಿನಿಮಾ ಡಿಸೆಂಬರ್
11 ರಂದು ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೂ
ಮೊದಲೇ ಅಭಿಮಾನಿಗಳು ಕೋಟೆನಾಡು ಚಿತ್ರದುರ್ಗದಲ್ಲಿ
ಸಂಭ್ರಮದಲ್ಲಿದ್ದಾರೆ. ನಗರದ ವೆಂಕಟೇಶ್ವರ ಚಿತ್ರಮಂದಿರವನ್ನು
ಭಾನುವಾರ ಬಂಟಿಂಗ್ಸ್, ಬ್ಯಾನರ್ ಮತ್ತು ಪ್ಲಕ್ಸ್ ಗಳಿಂದ
ಅಲಂಕರಿಸುವ ಮೂಲಕ ಸಿನಿ ಪ್ರೇಕ್ಷಕರು ತಮ್ಮ ಮೆಚ್ಚಿನ ನಟನ
ಚಿತ್ರಕ್ಕೆ ಅದ್ಧೂರಿಯಾಗಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಇದು
ಬಹುನಿರೀಕ್ಷಿತ ಚಿತ್ರವಾಗಿದ್ದು, ಅಭಿಮಾನಿಗಳ ಉತ್ಸಾಹ ಹೆಚ್ಚಿದೆ.

About The Author

Namma Challakere Local News
error: Content is protected !!