ಚಳ್ಳಕೆರೆ : ಜೀವನದ ಪ್ರತಿಯೊಂದು ಘಟನಾವಳಿಗಳನ್ನು ಮೆಲುಕು ಹಾಕುವ ಸುದೀನ ಈ ದಿನವಾಗಿದೆ ಅವರು ರಚಿಸಿದ ಸಂವಿಧಾನ ಇಂದು ಪ್ರಪಂಚದ ಎಲ್ಲಾ ವರ್ಗದ ಧರ್ಮಿಯರು ಒಪ್ಪುವಂತ ಮಹತ್ವದ ಸಂವಿಧಾನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಮುಂಬಾಗದ ಅಂಬೆಡ್ಕರ್ ವೃತ್ತದ ಬಳಿ ತಾಲೂಕು ಆಡಳಿತ ಹಾಗೂ ಸಮಸ್ತ ದಲಿತ ಸಂಘಟನೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಾಬಾ ಸಾಹೇಬ್ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಮೂಲಕ ಸಂವಿಧಾನದ ಹಕ್ಕುಗಳನ್ನು ಪಡೆಯುವ ಮೂಲಕ ಅವರ ನಿಲುವಿಗೆ ಬದ್ದರಾಗಬೇಕು, ಅಂಬೇಡ್ಕರ್ ಕಾಲವಾದ ದಿನಗಳಲ್ಲಿ ಪ್ರಪಂಚದ 193ದೇಶಗಳು ಮರುಗಿದ್ದವು ಅಂತಹ ಮಹಾನ್ ವ್ಯಕ್ತಿಗಳು ಬರೆದ ಕೊಟ್ಟ ಸಂವಿಧಾನ ನಾವು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಹಲವು ನೋವುಗಳನುಂಡು, ರಾಜಾಕೀಯವಾಗಿ, ಶೈಕ್ಷಣಿಕವಾಗಿ ಪ್ರಬುಧ್ದನಾಗಿ ಈಡೀ ದೇಶವೇ ಒಪ್ಪುವಂತ ಸಂವಿಧಾನ ರಚಿಸಿ ಇಂದು ನಮ್ಮ ಹೆಗಲಿಗೆ ಹಾಕಿ ಹೊಗಿದ್ದಾರೆ ಇದನ್ನು ಮುನ್ನಡೆಸಿಕೊಂಡು ಹೊಗುವ ಹೊಣೆಗಾರಿಕೆ ನಮ್ಮದಾಗಿದೆ, ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಆದರೆ ನೌಕರಿ ವರ್ಗದ ಆಡಳಿತ ಶಾಯಿಯಲ್ಲಿ ನಿವೃತ್ತಿ ಹೊಂದಿದ ಮೇಲೆ ಸಮಾಜದ ತಮ್ಮ ಜಾತಿ ವರ್ಗಗಳ ಮೇಲೆ ಆಧಮ್ಯೆ ಮೋಹದ ಮೂಲಕ ಸೇವೆ ಸಲ್ಲಿಸುವುದು ಉತ್ತಮ ಬೆಳವಣಿಗೆ ಆದರೆ ಈ ಬೆಳವಣಿಗೆ ಸೇವೆಯಲ್ಲಿರುವಾಗ ಸಲ್ಲಿಸಿದರೆ ಉತ್ತಮ ಎಂದರು.
ದಲಿತ ಸಂಘಟನೆಯ ಸಂಚಾಲಕ ಟಿ.ವಿಜಯ್ ಕುಮಾರ್ ಮಾತನಾಡಿ, ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಜಾತಿ, ಮತ, ಪಂಥ, ಧರ್ಮಗಳೆಂಬ ಮತ್ತಿನಿಂದ ಹೊರ ಬರಬೇಕು ಜನತಂತ್ರ ವ್ಯವಸ್ಥೆಯಲ್ಲಿ ಜನರೆ ನಿರ್ಣಯಕರು, ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು, ಮೀಸಲಾತಿ ಪ್ರತಿಯೊಂದು ಜಾತಿಗೆ ಇದೆ ಆದರೆ ಕೇವಲ ಡಾಂಬಿಕತೆಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರನ್ನು ಮಾತ್ರ ಸಿಲುಕಿಸುತ್ತಾರೆ, ಮಾನವನ ಮೌಲ್ಯಗಳನ್ನು ಪ್ರಪಂಚದ್ಯಾಂತ ಬಿತ್ತಿದ್ದ ಮಹಾನ್ ಯುಗ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಂದು ನಾವು ರಕ್ಷಿಸುವ ಕೆಲಸವಾಗಬೇಕಿದೆೆ ಎಂದರು.
ಸ್ಥಳದಲ್ಲಿ ಡಿಎಸ್ಎಸ್ ಸಂಚಾಲಕ ಟಿ.ವಿಜಯ್ ಕುಮಾರ್, ತಾಪಂ.ಮಾಜಿ ಸದಸ್ಯ ಹೆಚ್.ಸಮರ್ಥರಾಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್,
ಕೆ.ವೀರಭದ್ರಯ್ಯ, ನಾಗರಾಜ್, ತಿಪ್ಪೆಸ್ವಾಮಿ, ಚೌಳೂರು ಪ್ರಕಾಶ್, ನಗರಸಭೆ ಘಟಕಾಧಿಕಾರಿ ಭೂತಯ್ಯ, ಇಓ ಹೆಚ್ ಶಶಿಧರ್, ಬಿಸಿಎಂ ಅಧಿಕಾರಿ ರಮೇಶ್, ಬಿಇಓ.ಕೆ.ಎಸ್.ಸುರೇಶ, ಸಮಾಜ ಕಲ್ಯಾಣ ಅಧಿಕಾರಿ ದೇವ್ಲಾನಾಯ್ಕ್, ಸಿಡಿಪಿಓ ರಾಜುನಾಯ್ಕ್, ಕಾರ್ಮಿಕ ಅಧಿಕಾರಿ ಕುಸುಮ, ಪೌರಾಯುಕ್ತ ಜಗರೆಡ್ಡಿ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೋಟೋ, 1 ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಬಾಗದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಟಿ.ರಘುಮೂರ್ತಿ ಪುಷ್ಪಮಾಲೆ ಹಾಕಿದರು.

