“ಶ್ರೀಮದ್ ಭಗವದ್ಗೀತೆ ಭಾರತದ ಆಧ್ಯಾತ್ಮಿಕ ಸಂವಿಧಾನ”:- ಮಾತಾಜೀ ತ್ಯಾಗಮಯೀ ಹೇಳಿಕೆ. ಚಳ್ಳಕೆರೆ:-ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಶ್ರೀಮದ್ ಭಗವದ್ಗೀತೆ ಸದ್ಗ್ರಂಥವು ಭಾರತದ ನಿಜವಾದ ಆಧ್ಯಾತ್ಮಿಕ ಸಂವಿಧಾನ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಗೀತಾ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಗೀತಾ ಪಾರಾಯಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀಮದ್ ಭಗವದ್ಗೀತೆಯು 18 ಅಧ್ಯಾಯಗಳನ್ನು 700 ಶ್ಲೋಕಗಳನ್ನು ಒಳಗೊಂಡ ಬದುಕಿನ ಸಾರಸರ್ವಸ್ವವಾಗಿದ್ದು ತತ್ತ್ವಶಾಸ್ತ್ರವಾಗಿದೆ. ಇದು ಸನಾತನ ಹಿಂದೂ ಧರ್ಮದ ಭದ್ರವಾದ ಅಡಿಪಾಯವಾಗಿದೆ.ಈ ಆಧ್ಯಾತ್ಮಿಕ ಸದ್ಗ್ರಂಥಕ್ಕೆ ಮಾತ್ರ ಜನ್ಮದಿನವಿದ್ದು ಇದನ್ನು “ಗೀತಾ ಜಯಂತಿ”ಯಾಗಿ ಆಚರಿಸುತ್ತೇವೆ. ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಸಂಪೂರ್ಣ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ ಮತ್ತು ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಪಾರಾಯಣ ಕಾರ್ಯಕ್ರಮದಲ್ಲಿ ಡಿ.ಕಾವೇರಿ ಸುರೇಶ್,ಸುಮನಾ ಕೋಟೇಶ್ವರ, ಎಂ ಗೀತಾ ನಾಗರಾಜ್,ಮಮತಾ ಕೃಷ್ಣ,ಗೋವಿಂದಶೆಟ್ಟಿ, ವೆಂಕಟಲಕ್ಷ್ಮೀ, ರಶ್ಮಿ, ಯತೀಶ್ ಎಂ ಸಿದ್ದಾಪುರ, ಚೇತನ್, ಚಂದ್ರಮ್ಮ,ಉಷಾ ಶ್ರೀನಿವಾಸ್, ನಾಗರತ್ನಮ್ಮ , ಸಿ.ಎಸ್.ಭಾರತಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಲತಾ ಭಕ್ತವತ್ಸಲ, ಸುಧಾಮಣಿ, ಗೀತಾ ವೆಂಕಟೇಶರೆಡ್ಡಿ, ಸಂಧ್ಯಾ ಸುಧಾಕರ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!