ಚಳ್ಳಕೆರೆ: ಹಿಂದಿನಿಂದ ಟ್ರಾಕ್ಟರ್ ಗೆ ಕಾರು ಡಿಕ್ಕಿ, ಟ್ರಾಕ್ಟರ್
ಚಾಲಕ ಸಾವು
ಸೋಮವಾರ ತಡ ರಾತ್ರಿ ಚಳ್ಳಕೆರೆ ಬುಡ್ನಹಟ್ಟಿ ಬಳಿ ರಾಷ್ಟ್ರೀಯ
ಹೆದ್ದಾರಿ 150 ರಲ್ಲಿ, ಮೆಕ್ಕೆಜೋಳ ತುಂಬಿದ್ದ ಟ್ರಾಕ್ಟರ್‌ಗೆ
ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ
ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿ ಚಾಲಕ ಪ್ರಶಾಂತ್ ಸ್ಥಳದಲ್ಲಿಯೇ
ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ
ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

