ಚಳ್ಳಕೆರೆ : ನಮ್ಮನ್ನ ಹಾಳುವ ಸರ್ಕಾರಗಳು ರೈತರಿಗೆ ವರದಾನ ಆಗಬೇಕೆ ಹೊರತು ಮಾರಕವಾಗಬಾರದು, ರೈತರು ಈಗಾಗಲೇ ಬೆಳೆ ಹಾನಿ, ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಆದರೆ ಬೆಳೆದ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗದೆ ರೈತ ವಿಷಕುಡಿಯುವಂತ ಪರಿಸ್ಥಿತಿಯಲ್ಲಿ ಇದ್ದಾನೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರೈತರು ಬೆಳೆದ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆ ಸಿಗಲು ಸರ್ಕಾರದ ವತಿಯಿಂದ ಖರೀದಿ ಕೇಂದ್ರ ತೆರೆಯಲು ಈಗಾಗಲೇ ಹಲವಾರು ಬಾರಿ ಅಧಿಕಾರಿಗಳ ಗಮನ ಸೆಳೆದಿದೆ, ಆದರೆ ಇದುವರೆಗೂ ಕೂಡ ಸರ್ಕಾರ ಹಾಗೂ ಅಧೀನ ಅಧಿಕಾರಿಗಳು ವಿಫಲರಾಗಿದ್ದಾರೆ ಆದ್ದರಿಂದ ರೈತರು ಸಂಕಷ್ಟಕ್ಕೆ ದೂಡುವಂತಾಗಿದೆ.
ನಮ್ಮ ಆಳುವ ಶಾಸಕರು ಮಂತ್ರಿಗಳು ಮುಖ್ಯಮಂತ್ರಿಗಳು ದೆಹಲಿ ಪ್ರವಾಸದಲ್ಲಿ ಮುಳುಗಿದ್ದಾರೆ , ಆದರೆ ರೈತರ ಸಂಕಷ್ಟ ಆಲಿಸಲು ಯಾವುದೇ ಸರ್ಕಾರ ಮುಂದೆ ಬರುತ್ತಿಲ್ಲ ಮೆಕ್ಕೆಜೋಳ ಖರೀದಿ ಕೇಂದ್ರ , ಶೇಂಗಾ ಪರಿಹಾರ , ತೊಗರಿ ಬೆಳೆ ನಷ್ಟ ಪರಿಹಾರ ಈಗೆ ರೈತರ ಸಮಸ್ಯೆಗಳು ಸಾಲ ಸಾಲು ಇವೆ.
ಆದರೆ ಸರ್ಕಾರ ಹಾಗೂ ಶಾಸಕರು ಮಂತ್ರಿಗಳು ದೆಹಲಿ ಪ್ರವಾಸದಲ್ಲಿ ಮುಳುಗಿದ್ದರೆ ಹೊರತು ರೈತರ ಸಂಕಷ್ಟಗಳನ್ನು ಆಲಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.


