ಚಳ್ಳಕೆರೆ :
ಹೆಚ್. ಪಿ. ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಎಂ ಕೆ ದೇವಪ್ಪ ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ಡಾ. ಸಿ ಶಿವಲಿಂಗಪ್ಪ, ನಿವೃತ್ತ ಪ್ರಾಚಾರ್ಯರು, ಸಾಹಿತಿಗಳು. ಕಾರ್ಯಕ್ರಮವನ್ನು ಕುರಿತು ಮಾತನಾಡಿ ಕನ್ನಡ ಸಾಹಿತ್ಯದಲ್ಲಿನ ಭಾಷಭಿಮಾನದ ವಿಷಯವನ್ನು ಹೇಳಿದರು.
ಕನ್ನಡ ಭಾಷಭಿಮಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಬೆಳೆಸಬೇಕು. ಕುವೆಂಪು ರವರ ವಿಚಾರಗಳನ್ನು ತಿಳಿಸುತ್ತಾ ಕನ್ನಡ ಭಾಷೆ ಬದುಕಿನ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು. ಉದ್ಯೋಗವನ್ನು ನೀಡುವ ಭಾಷೆಯಾಗಿ ಬೆಳೆಸಬೇಕು ಎಂದು ತಿಳಿಸಿದರು.
ಪ್ರಚಾರ್ಯರಾದ ಡಾ. ದೇವಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ವೈಚಾರಿಕತೆಯ ವಿಷಯಗಳನ್ನು ವಿವರಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಕೆ ಶಿವಾನಂದಯ್ಯ ಸರ್, ಐ ಕ್ಯೂ ಎ ಸಿ ಸಂಚಾಲಕರಾದ ಚನ್ನಕೇಶವ ಸರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಪ್ರಧ್ಯಾಪಕರಾದ ಪೈರೋಜ , ಜಗನ್ನಾಥ, ರಾಜಣ್ಣ, ಮುರಳಿ, ಸತೀಶ್, ಗಂಗನಾಯ್ಕ್, ಮಂಜುನಾಥ್, ಪಾಪಣ್ಣ ಹಾಗೂ ಇಂಗ್ಲಿಷ್ ವಿಭಾಗದ ನಾಗರಾಜ್, ಸಾಂಸ್ಕೃತಿಕ ಸಂಚಾಲಕರಾದ ಡಾ ರಾಜಕುಮಾರ, ಕರಿಬಸಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶರತ್ ಬಾಬು ಕೆ, ನಿರೂಪಿಸಿದರು, ಚಂದನ ಟಿ ಸ್ವಾಗತಿಸಿದರು. ವಿಜಯಕುಮಾರ್ ರವರು ವಂದನಾರ್ಪಣೆ ಮಾಡಿದರು.

