ಚಿತ್ರದುರ್ಗ ಜಿಲ್ಲೆಯಲ್ಲಿ ಆಚರಿಸುವಂತಹ ಬಹು ಸಾಂಸ್ಕೃತಿಕ ಮತ್ತು ಬಹು ಧಾರ್ಮಿಕ ಹಬ್ಬಗಳಲ್ಲಿ ಗೌರಿದೇವಿಯ ಹಬ್ಬವು ಕೂಡ ಒಂದಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ತಲುಕು ಹೋಬಳಿಯ ಮೈಲನಹಳ್ಳಿ ಗ್ರಾಮದಲ್ಲಿ ಗೌರಿ ದೇವಿಯ ಕಾರ್ತಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಹಿಂದೂ ಧರ್ಮವೂ ವಿಶ್ವದಲ್ಲೆ ಮನ್ನಣೆ ಗಳಿಸಿರುವುದು ಇಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿರುವಂತಹ ವೈವಿಧ್ಯಮಯ ಜಾತಿ ಮತ್ತು ಪಂಗಡಗಳು ಅವರುಗಳ ಸಾಂಪ್ರದಾಯಿಕ ಅನುಗುಣವಾಗಿ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತವೆ ಭಗವದ್ಗೀತೆಯನ್ನು ಬರೆದಂತಹ ಶ್ರೀಕೃಷ್ಣನ ಕುಲದವರಿದ್ದಾರೆ ರಾಮಾಯಣವನ್ನು ಬರೆದಂತಹ ವಾಲ್ಮೀಕಿ ಅವರ ಕುಲದವರಿದ್ದಾರೆ ಜಗತ್ತಿಗೆ ಅರಿವು ನೀಡಿದಂತಹ ಬಸವಣ್ಣನವರ ಕುಲದವರಿದ್ದಾರೆ ಇವೆಲ್ಲವುಗಳಿಗೂ ಮಿಗಿಲಾಗಿ ಪರಿಪೂರ್ಣವಾದ ಕಾನೂನನ್ನ ಸಮಾಜಕ್ಕೆ ನೀಡಿದಂತಹ ಅಂಬೇಡ್ಕರ್ ಅವರ ಕುಲದವರಿದ್ದಾರೆ ಈ ಎಲ್ಲ ದಾರ್ಶನಿಕರ ಸಂದೇಶ ಒಂದೇ ಸತ್ ಪ್ರಜೆಯಾಗಿ ಎಲ್ಲರನ್ನೂ ಪ್ರೀತಿಸು ನೋವಿನಲ್ಲಿರುವವರ ಬಾಳಿಗೆ ಬೆಳಕಾಗು ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯ ಪ್ರತಿರೂಪವಾಗು ಎಂಬುದೇ ಆಗಿದೆ ಇಂತಹ ವೈವಿಧ್ಯಮಯ ಜನಾಂಗ ಮತ್ತು ಈ ಜನಾಂಗಗಳು ಆಚರಣೆ ಮಾಡುತ್ತಿರುವಂತ ಇಂದ ವಿಶಿಷ್ಟವಾದ ಹಬ್ಬಗಳು ಬಹುಶಃ ನಮ್ಮ ರಾಜ್ಯದಲ್ಲಿ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಈ ಆಚರಣೆ ಮತ್ತು ಸಂಪ್ರದಾಯಗಳ ಜೊತೆ ಕಾಲ ಬದಲಾದಂತೆ ವಿಜ್ಞಾನ ತಂತ್ರಜ್ಞಾನ ಉನ್ನತ ಶಿಕ್ಷಣ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಇಂದಿನ ಯುವಕರು ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ ಬೂತೇಕಾಯಿ ಗ್ರಾಮಗಳಲ್ಲಿ ಹೆಚ್ಚು ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದು ಇಂತಹ ವಿದ್ಯಾವಂತ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಪ್ರತಿಯೊಂದು ಕುಟುಂಬಗಳಲ್ಲೂ ಕೂಡ ಮಕ್ಕಳನ್ನು ಉನ್ನತ ಶಿಕ್ಷಣದಡೆ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಗೌರಿ ದೇವಸ್ಥಾನದಿಂದ ಅಲಂಕೃತ ವಾದಂತ ಹೋರಿಗಳನ್ನು ಭವ್ಯ ಮೆರವಣಿಗೆಯ ಮುಖಾಂತರ ಕಿಚ್ಚು ಹಾಯಿಸಿ ಇಡೀ ಗ್ರಾಮಸ್ಥರು ಸಂಭ್ರಮ ಪಟ್ಟರು ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿನೇಶ್ ಪ್ರಹ್ಲಾದ ಚಂದ್ರಣ್ಣ ನಾಗೇಶ ಮಂಜಣ್ಣ ಗೋವಿಂದು ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!