ಗ್ರಾಹಕರು ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಎನ್.ಜಿ. ಮಮತಾ.
ನಾಯಕನಹಟ್ಟಿ ಪ್ರತಿಯೊಬ್ಬ ಗ್ರಾಹಕರು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯೇತರರಾದ ಎನ್. ಜಿ. ಮಮತಾ ತಿಳಿಸಿದರು.
ಬುಧವಾರ ಪಟ್ಟಣದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಆಯೋಜಿಸಿದ್ದ ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಕಾರ್ಯಕ್ರಮದಲ್ಲಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ 2024 ಜನವರಿ 22ರಂದು ಪ್ರಧಾನಮಂತ್ರಿಗಳು ಜಾರಿಗೆ ತಂದರು ಇದರ ಮುಖ್ಯ ಉದ್ದೇಶ ವಿದ್ಯುತ್ ಉತ್ಪಾದಿಸಿ ಹಣ ಉಳಿಸಿ ಆದಾಯ ಗಳಿಸಿ ಎನ್ನುವ ಉದ್ದೇಶವಾಗಿದೆ ಸುಮಾರು 5000 ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಅನುಕೂಲವಾಗಲೆಂದು ಸರ್ಕಾರ ಇಂತಹ ಯೋಜನೆಯ ನಾಯಕನಹಟ್ಟಿ ಪಟ್ಟಣವನ್ನ ಆಯ್ಕೆ ಮಾಡಿದೆ ಆದ್ದರಿಂದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಹಕರಿಗೆ ಮನವಿ ಮಾಡಿದರು.
ನಾಯಕನಹಟ್ಟಿ ಬೆಸ್ಕಾಂ ಶಾಖೆಯ ಶಾಖಾಧಿಕಾರಿ ಎನ್. ಬಿ. ಬೋರಣ್ಣ ಮಾತನಾಡಿದರು.ಈ ಯೋಜನೆಯು ನಾಯಕನಹಟ್ಟಿ ಪಟ್ಟಣಕ್ಕೆ ಆಯ್ಕೆಯಾಗಿರುವುದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗನ್ನು ಪಡೆದುಕೊಳ್ಳಬೇಕು ಎಂದರು
ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್. ಗ್ರಾಮೀಣ ಪ್ರದೇಶದ ಬಡ ಜನರಿಗೆ ಸರ್ಕಾರ ಉಪಯುಕ್ತವಾಗುವ ಯೋಜನೆಯನ್ನು ಜಾರಿಗೆ ತಂದಿದೆ ಪಟ್ಟಣದಲ್ಲಿ ಅತಿ ಹೆಚ್ಚು ಕಡುಬಡವರಿರುವುದರಿಂದ ಇಂತಹ ಯೋಜನೆ ಜನರಿಗೆ ಉತ್ತಮ ಯೋಜನೆಯಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ. ಶ್ರೀನಿವಾಸ್ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವ ಯೋಜನೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಅನುಕೂಲ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಎಂ.ಟಿ. ಮಂಜುನಾಥ್, ನಾಯಕನಹಟ್ಟಿ ಬೆಸ್ಕಾಂ ಶಾಖೆಯ ಸಿಬ್ಬಂದಿಗಳಾದ ಜಿ. ಗೋವಿಂದಪ್ಪ, ಮೇಲ್ವಿಚಾರಕರಾದ ಆರ್ಟಿ ರುದ್ರಮುನಿ, ಶಮಿವುಲ್ಲಾ, ಸುಲ್ತಾನ್ ನಾದಫ್, ಶಿವರಾಜ್, ಎಸ್.ಓ ದಿನೇಶ್, ಟಿ ಆರ್ ಸೈಯದ್ ಇಮ್ರಾನ್, ಇರ್ಫಾನ್, ಮಲ್ಲಿಕಾರ್ಜುನ್ ಅಜಯ್ ಕುಮಾರ್ ಅಭಿಷೇಕ್, ಜಗನ್ನಾಥ್, ತಿಪ್ಪೇಸ್ವಾಮಿ ಸೇರಿದಂತೆ ಗ್ರಾಹಕರು ಇದ್ದರು

