ಹಿರಿಯೂರು: ಕೈಕೊಟ್ಟ ವಿದ್ಯುತ್ ಮತ್ತು ಆಕ್ಸಿಜನ್ ;
ಸಾವನ್ನಪ್ಪಿದ ರೋಗಿ
ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ವಿದ್ಯುತ್
ಇಲ್ಲದೆ, ಆಕ್ಸಿಜನ್ ಮತ್ತು ಮಾನೀಟರ್ ನಿಂತು ಸಾವನ್ನಪ್ಪಿರುವ
ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿ
ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಚಿಕಿತ್ಸೆ ಕೊಡುವಾಗ ಏಕಾಏಕಿ,
ವಿದ್ಯುತ್ ಹಾಗೂ ಆಕ್ಸಿಜನ್ ಮಾನೀಟರ್ ನಿಂತು ಹೋಗಿದ್ದರಿಂದ
ರೋಗಿ ಮೃತಪಟ್ಟಿದ್ದಾನೆ. ಘಟನೆಯಿಂದ ರೋಗಿ ಕುಟುಂಬಸ್ಥರ
ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರಿ ಆಸ್ಪತ್ರೆ ಈ ಅವ್ಯವಸ್ಥೆಗೆ
ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

About The Author

Namma Challakere Local News
error: Content is protected !!