ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆ ಎನ್ನುವುದು ಮರಿಚೀಕೆಯಾಗಿದೆ ಎಂಬುದಕ್ಕೆ ತಾಜಾ ಉದಾಹರಣೆ ನಗರದ ಸೋಮಗುದ್ದು ರಸ್ತೆ ನ್ಯಾಯಾಲಯ ಮುಂಭಾಗದ ರಸ್ತೆಯೇ ಸಾಕ್ಷಿ ಕರಿಸುತ್ತದೆ.
ಹೌದು ಚಳ್ಳಕೆರೆ ನಗರದಲ್ಲಿ ಸ್ವಚ್ಚತೆ ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿಯನ್ನು ಕಾಣಬಹುದು, ಅದರಂತೆ ವಾರ್ಡ್ ನಂಬರ್ 21 ಅಂಬೇಡ್ಕರ್ ನಗರದಲ್ಲಿ ವಾಸಿಸುವ ನಿವಾಸಿಗಳು ಸೊಳ್ಳೆಗಳ ಕಾಟದಿಂದ ರೋಸಿ ಹೋಗಿದ್ದಾರೆ, ನ್ಯಾಯಾಲಯದ ಮುಂಭಾಗ ಹಾದುಹಿದ ರಸ್ತೆ ಕಸದಿಂದ ಕೂಡಿದೆ ಇನ್ನೂ ಈ ರಸ್ತೆಯಲ್ಲಿ ಸರಕಾರದ ಅನೇಕ ಇಲಾಖೆಗಳಿಗೆ ದಾವಿಸುವ ಸಾರ್ವಜನಿಕರು ಮೂಗು ಮುಚ್ಚುವಂತೆ ಇದೆ, ಇನ್ನೂ ನ್ಯಾಯಾಲಯ, ತಾಲೂಕು ಕ್ರೀಡಾಂಗಣ, ಸರಕಾರಿ ಪದವಿ ಪೂರ್ವ ಕಾಲೇಜು ,ಬಾಪೂಜಿ ವಿದ್ಯಾರ್ಥಿಗಳ ನಿಲಯ, ಕೃಷಿ ಇಲಾಖೆ, ಸರಕಾರಿ ಪ್ರಾಥಮಿಕ ಶಾಲೆ , ಗ್ರಂಥಾಲಾಯ ಈಗೇ ಹಲವು ಇಲಾಖೆಗಳ ಪ್ರಮುಖ ರಸ್ತೆ , ಸೋಮಗುದ್ದು ರಸ್ತೆ, ಆದರೆ ಚರಂಡಿಗಳು ಸ್ವಚ್ಚತೆ ಇಲ್ಲದೆ, ರಸ್ತೆ ಮೇಲೆಯೇ ಕಸದ ರಾಶಿ ಗಳನ್ನು ಕಾಣಬಹುದು, ನಗರಸಭೆ ಅಧಿಕಾರಿಗಳು ಇತ್ತ ದಾವಿಸಿ ಸಾರ್ವಜನಿಕರಿಗೆ ಮುಕ್ತವಾದ ವಾತಾವರಣ ಕಲ್ಪಿಸಿ ಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

