ಚಳ್ಳಕೆರೆ : ನೀವೇಶನಗಳಿಗೆ ಹದ್ದು ಬಸ್ತುಮಾಡಿ ಖಾತೆ ಮಾಡಿಕೊಡಬೇಕೆಂದು ತಾಲೂಕು ಪಂಚಾಯತಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಮುಙದುವರೆದಿದೆ.
ತಾಲೂಕು ಪಂಚಾಯತಿ ಮುಂದೆ ಕಳೆದ ಹಲವು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದ್ದು, ಅಧಿಕಾರಿಗಳ ಪ್ರತಿಭಟನೆಗೆ ಮಣಿದು ಈಗಾಗಲೇ ಇರುವ ಜಾಗದಲ್ಲಿ ಖಾತೆ ಮಾಡಲು ಸೂಕ್ತ ಭೂಮಿ ಹದ್ದು ಬಸ್ತ್ ಮಾಡುತ್ತಿದ್ದಾರೆ
ಟಿ.ಎನ್.ಕೋಟೆ ಗ್ರಾ.ಪಂ. ವ್ಯಾಪ್ತಿಯ, ಗೋಸಿಕೆರೆ ಗ್ರಾಮದಲ್ಲಿ ರಿಸನಂ 10
ರಲ್ಲಿ 6 ಎಕರೆಗಳಲ್ಲಿ 2014 ರಲ್ಲಿ ಆಶ್ರಯ ಮನೆ ಯೋಜನೆಡಿಯಲ್ಲಿ ಖಾಲಿ ನಿವೇಶನ ಉದ್ದೇಶಕ್ಕಾಗಿ ಹಕ್ಕುಪತ್ರ ವಿತರಿಸಲಾಗಿದ್ದು, ಆದರೆ ಇದುವರೆಗೆ ಲೇಹೌಟ್ ಪ್ಲಾನ್
ಮಾಡಿ ಹದ್ದಬಸ್ತುಗೊಳಿಸಿ ಖಾತೆಯನ್ನು ಮಾಡಿರುವುದಿಲ್ಲ, ಹಾಗಾಗಿ ಪ.ಜಾತಿ ಜನಾಂಗದವರಿಗೆ ನಿವೇಶನಗಳಿಗೆ ಖಾತೆ ಮಾಡಿಕೊಳ್ಳಲು ಮನೆಯನ್ನು
ನಿರ್ಮಿಸಿಕೊಳ್ಳಲು ಖಾತೆ ಮಾಡುವಂತೆ ಒತ್ತಾಯಿಸಿದರು
ಆದರೆ ನಮಗೆ ನೀಡಿರುವ ಹಕ್ಕು ಪತ್ರಕ್ಕೆ ಖಾತೆ ಮಾಡುವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುದಿಲ್ಲ ಎಂದು ಪ್ರತಿಭಟನಾಕಾರರ ಮಾತಾಗಿದೆ.
ಇದೇ ಸಂಧರ್ಭದಲ್ಲಿ ಓಂಕಾರ್ ಮೂರ್ತಿ ಬಸವರಾಜಪ್ಪ ತಿಪ್ಪೇಸ್ವಾಮಿ ರಂಗಪ್ಪ ಪ್ರಭು ಸಂಪತ್ ಮಲ್ಯಪ್ಪ ಇತರರು ಮಹಿಳಾ ಫಲಾನುಭವಿಗಳು ಹಾಜರಿದ್ದರು

