ಚಿತ್ರದುರ್ಗ: ಊಟದಲ್ಲಿ ಹಲ್ಲಿ 8 ವಿದ್ಯಾರ್ಥಿನಿಯರು
ಆಸ್ಪತ್ರೆಗೆ ದಾಖಲು
ಚಿತ್ರದುರ್ಗದ ಎಸ್ಸಿ ಎಸ್ಟಿ ವಿದ್ಯಾರ್ಥಿನಿಲಯದಲ್ಲಿ ಊಟದಲ್ಲಿ ಹಲ್ಲಿ
ಬಿದ್ದಿದೆ ಎಂದು ಗಾಬರಿಗೊಂಡ ಎಂಟು ಮಂದಿ ವಿದ್ಯಾರ್ಥಿಗಳನ್ನು
ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಬಿಂದು ತಟ್ಟೆಯಲ್ಲಿ
ಹಲ್ಲಿಯನ್ನು ಕಂಡು ಭಯಗೊಂಡಿದ್ದು, ಇದರಿಂದ ಇತರ
ವಿದ್ಯಾರ್ಥಿಗಳು ಸಹ ಆತಂಕಗೊಂಡಿದ್ದಾರೆ. ತಕ್ಷಣವೇ ಅವರನ್ನು
ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ನಂತರ ಸಮಾಜ
ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಹಾಸ್ಟೆಲ್ ಗೆ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ.

