ಚಳ್ಳಕೆರೆ : ಕೊಂಚ ಯಾಮಾರಿದರೆ ಅಪಾಯ ಕಟ್ಟಿಟ ಬುತ್ತಿ ಹೌದು ಇದು ಯಾವುದೋ ದೂರದ ಗ್ರಾಮೀಣ ಪ್ರದೇಶದ ಸುದ್ದಿಯಲ್ಲಿ ಬದಲಾಗಿ ಚಳ್ಳಕೆರೆ ನಗರದ ಹೃದಯ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ರಸ್ತೆ ಗುಂಡಿಗಳ ಸುದ್ದಿ
ನಿಜಕ್ಕೂ ಅಭಿವೃದ್ಧಿ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡುವ ಅಧಿಕಾರಿಗಳು ಈ ಸ್ಟೋರಿಯನ್ನು ನೋಡಲೇಬೇಕು,
ನಗರದ ಹೃದಯ ಭಾಗದ ಉಡಸಲಮ್ಮ ದೇವಸ್ಥಾನ ರಸ್ತೆ ಹಾಗೂ ಬಳ್ಳಾರಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ನೆಹರು ವೃತ್ತದಿಂದ ಕೂಗಳೆತೆಯ ದೂರದಲ್ಲಿ ಇದ್ದರು ಕೂಡ ಅಭಿವೃದ್ಧಿಯಿಂದ ಹಿಂದೆ ಸರಿದಿದೆ.
ಇನ್ನೂ ಮಳೆ ಬಂದರೆ ಸಾಕು ರಸ್ತೆಗಳ ಮಳೆ ನೀರಿನಿಂದ ಮುಳುಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರ ಪಾಲಿಗೆ ಯಮವಾಗಿದ್ದಾವೆ.
ಇನ್ನೂ ಸ್ಥಳೀಯ ನಗರಸಭೆ ಅಧಿಕಾರಿಗಳು ಇತ್ತ ಕಡೆ ಮುಖಮಾಡದೆ ಕಛೇರಿಯಲ್ಲಿ ಕುಳಿತು ದಿಕ್ಸೂಚಕರಾಗಿದ್ದಾರೆ.
ಮೊಣಕಾಲು ಉದ್ದ ನೀರು ನಿಂತರು ತಾತ್ಕಾಲಿಕ ವಾಗಿ ನೀರು ಹೊರಹಾಕುವರೆ ಹೊರತು ಶಾಶ್ವತವಾಗಿ ಪರಿಹಾರ ನೀಡಿಲ್ಲ.
ಈಗಂತ ಇಲ್ಲಿನ ಅಧಿಕಾರಿಗಳು ಕಳೆದ ಹತ್ತರಿಂದ ಅದಿನೈದು ವರ್ಷಗಳ ಕಾಲ ಇಲ್ಲೆ ಮೊಕಂ ಹೂಡಿದರು ಯಾವ ಅಧಿಕಾರಿ ವಾರ್ಡ್ಗಳಿಗೆ ಸುಳಿವಿಲ್ಲ.
ಸ್ಥಳೀಯ ಜನಪ್ರತಿನಿಧಿಗಳಿಗೆ ಕುಮ್ಮಿಕ್ಕಿನಿಂದ ಒಂದೇ ಸ್ಥಳದಲ್ಲಿ ಸುದೀರ್ಘ ವಾಗಿ ಸೇವೆ ಸಲ್ಲಿಸಿದರು , ಯಾವ ಪುರಷರ್ತಕ್ಕೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಮಾಧ್ಯಮಗಳಲ್ಲಿ ನಗರದ ಅವ್ಯವಸ್ಥೆ ಬಗ್ಗೆ ಎಷ್ಟೆ ಸ್ಟೋರಿ ಮಾಡಿದರು ಕ್ಯಾರೆ ಎನ್ನದ ಅಧಿಕಾರಿಗಳು ಜನಪ್ರತಿನಿಧಿಗಳ ಕೃಪಾಕಟಾಕ್ಷೆ ನಮ್ಮಮೇಲೆ ಇದೆ ಎಂದು ಇಲ್ಲಿನ ಅಧಿಕಾರಿಗಳ ಅಸಡ್ಡೆ ಮನೋಭಾವ, ಸಂಘ ಸಂಸ್ಥೆಗಳು, ಸಾರ್ವಜನಿಕರ, ಸ್ಥಳೀಯ ನಿವಾಸಿಗಳು ಪ್ರತಿನಿತ್ಯ ನಗರಸಭೆ ವಿರುದ್ಧ ಧ್ವನಿ ಎತ್ತಿದರು ಕ್ಯಾರೆ ಎನ್ನದ ಸ್ಥಳೀಯ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಆರ್ಶಿವಾದವು ಇದೆ ಎಂದು ಹೇಳಾಗುತ್ತಿದೆ.
ಇನ್ನೂ ನಗರದಲ್ಲಿ ಪುಟ್ ಬಾತ್ ತೆರವು, ಬೀದಿ ನಾಯಿಗಳ ಹಾವಳಿ, ಸ್ವಚ್ಚತೆ ಇಲ್ಲದ ರಸ್ತೆಗಳು, ಹೂಳು ತುಂಬಿದ ಚರಂಡಿಗಳು, ಈಗೇ ಸಾಲು ಸಾಲು ಸಮಸ್ಯೆಗಳು ತಾಂಡವಾಡಿದರು ಕ್ಯಾರೆ ಎನ್ನುವುದಿಲ್ಲ, ಇನ್ನೂ ಕೆಲ ಜನಪ್ರತಿನಿಧಿಗಳು ಮಾತ್ರ ಮುಖ್ಯ ರಸ್ತೆ ಬಿಟ್ಟು ಬೇರೆಕಡೆ ಗಮನಹರಿಸುವುದಿಲ್ಲ. ಈಗೇ ಜನರ ಕಳಕಳಿಗೆ ನಮ್ಮ ವಾಹಿನಿ ಧ್ವನಿಯಾಗಲಿದೆ…

