ಚಳ್ಳಕೆರೆ : ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲು ಬ್ಯಾಂಕ್ ನೆರವು ಅಗತ್ಯ, ಸಾಮಾಜಿಕವಾಗಿ ಬುಡಕಟ್ಟು ಸಂಸ್ಕೃತಿಯAತಹ ಗ್ರಾಮಗಳು ಅಭಿವೃದ್ದಿಯಾಗಲು ಇಂತಹ ಕಾರ್ಯಕ್ರಮಗಳು ಸಾರ್ಥಕ ಮೆರೆಯುತ್ತಾವೆ ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.


ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ರೈತರಾತ್ರಿ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಗ್ರಾಹಕರು ಮತ್ತು ಸಾರ್ವಜನಿಕರು ಹಿತವನ್ನು ಬ್ಯಾಂಕ್‌ಗಳು ಅರ್ಥಮಾಡಿಕೊಂಡು ಜನ ಸ್ನೇಹಿಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.


ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾಮ್ಯದ ಇಲಾಖೆಗಳು ಸರ್ಕಾರದಿಂದ ಕೊಡುವ ಸವಲತ್ತುಗಳನ್ನು ಇಂತಹ ಶಿಬಿರಗಳ ಮುಖಾಂತರ ಸಾರ್ವಜನಿಕರ ಮನೆ ಬಾಗಿಲಿಗೆ ಒದಗಿಸಿದಾಗ ಮಾತ್ರ ಸರ್ಕಾರದ ಆಶಯಗಳು ಈಡೆರುತ್ತಾವೆ. ಈ ಕ್ಷೇತ್ರದ ಶಾಸಕರ ಆಶಯದಂತೆ ರಾಜ್ಯ ಸರ್ಕಾರದ ಅದೀನದಲ್ಲಿ ಬರುವಂತಹ ತಾಲೂಕು ಆಡಳಿತ ಈಗಾಗಲೇ ಸುಮಾರು 42 ಗ್ರಾಮಗಳನ್ನು ಸಮಸ್ಯೆಮುಕ್ತ ಗ್ರಾಮಗಳನ್ನಾಗಿ ಮಾಡಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಕರು ಅಲೆಯುವದನ್ನು ತಗ್ಗಿಸಲಾಗಿದೆ, ಹಾಗೇಯೆ ಬ್ಯಾಂಕ್‌ಗಳು ಮತ್ತು ಸರ್ಕಾರಿ ಕಛೇರಿಗಳು ಮತ್ತು ಇಲ್ಲಿನ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅಧಿಕಾರಿಗಳ ಕಾರ್ಯ ಸಾರ್ಥಕತೆ ಕಂಡುಬರುತ್ತದೆ ಎಂದರು.


ಎಸ್‌ಬಿಐ ಎಜಿಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರಿಗೆ ಕೊಡ ಮಾಡುವಂತಹ ಸೌಲಭ್ಯಗಳು, ಸಾಲಗಳು ಮಹತ್ವ ಮರುಪಾವತಿ ಇವುಗಳ ವಿಧಾನಗಳ ಬಗ್ಗೆ ವಿಸೃತವಾಗಿ ಪ್ರಸ್ತಾವಿಕವಾಗಿ ಮಾತನಾಡಿದರು.
ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಸುರೇಶ್, ಸರ್ಕಾರಿ ಅಭಿಯೋಜಕ ಅಶ್ವಥ ನಾಯಕ್ ಮಾತನಾಡಿದರು. ಈ ಸಮಾರಂಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಬಸವರಾಜ್, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಡಿವೈಎಸ್‌ಪಿ ರಮೇಶ್‌ಕುಮಾರ್, ಪಿಎಸ್‌ಐ ಕೆ.ಸತೀಶ್‌ನಾಯ್ಕ್, ಮುಖಂಡ ದೊರೆಬೈಯಣ್ಣ, ನನ್ನಿವಾಳ ಗ್ರಾಮ ಪಂಚಾಯಿತ್ ಸದಸ್ಯರು, ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!