ಚಳ್ಳಕೆರೆ :

ಅಧಿಕಾರಿಗಳ ನಿರ್ಲಕ್ಷ್ಯ ದಿಂದ 2023-24 ನೇ ಸಾಲಿನ ಶೇಂಗಾ ಮತ್ತು ತೊಗರಿ ಬೆಳೆ ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ, ಸು. 293 ಜನ ರೈತರಿಗೆ ಬೆಳೆ ನಷ್ಟವಾಗಿದೆ ಆದ್ದರಿಂದ ನ್ಯಾಯಕ್ಕಾಗಿ ಗ್ರಾಹಕರ ಕೋರ್ಟ್‌ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಚಳ್ಳಕೆರೆ ತಾಲೂಕು ಕಸಬಾ ಹೋಬಳಿ , ಶೇಂಗ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ಸಿ. ಶಿವಲಿಂಗಪ್ಪ ಹೇಳಿದರು

ಅವರು‌ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದಿಂದ ಬೆಳೆ ನಷ್ಟ ರೈತರೊಂದಿಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು, ಅಧಿಕಾರಿಗಳ ತಪ್ಪು ಮಾಹಿತಿ ನೀಡಿ ರೈತರಿಗೆ ಬರಬೇಕಾದ ಬೆಳೆಪರಿಹಾರದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಪಾಳು ಭೂಮಿ, ನೀರು ಹರಿಸಿದ ಬೆಳೆ, ಇನ್ಸೂರೆನ್ಸ್ ಕಟ್ಟದೆ ಇರುವ ರೈತರು, ರೈತನಲ್ಲದ ಅನಾಮಧೇಯ ರೈತನ ಹೊಲ ಈಗೇ ಸ್ಥಳೀಯ ಅಧಿಕಾರಿಗಳು ಎಡವಟ್ಟಿನಿಂದ ನೂರಾರು ರೈತರು, ಬೆಳೆ ವಿಮೆಯಿಂದ ಹಿಂದೂಳಿಯುವಂತಾಗಿದೆ.

ಬೆಳೆವಿಮೆಗಾಗಿ ಗ್ರಾಹಕರ ಕೋರ್ಟ್ ಮೊರೆ ಹೋಗಲಾಗಿದೆ, ಇನ್ನೂ ತೀರ್ಪು ಬರಬೇಕು,

2023-24ನೇ ಸಾಲಿನ ಮುಂಗಾರು ಹಂಗಾಮಿನ ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮಳೆ ಆಶ್ರಿತ ತೊಗರಿ ಮತ್ತು ಸೋಮಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆಯ ಆಶ್ರಿತ ಶೇಂಗಾ ಬೆಳೆಗಳಲ್ಲಿ 16 ತಾಕುಗಳನ್ನು ಬೆಳೆಕಟ್ಟಾವು ಪ್ರಯೋಗಗಳಿಗೆ ಆಯ್ಕೆ ಮಾಡಿಕೊಳ್ಳದೆ ನೀರಿನ ನೆರವಿನಿಂದ ಬೆಳೆದ ಒಂಬತ್ತು ಜಮೀನಿನ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಿದ್ದರಿಂದ ಬೆಳೆ ವಿಮೆ ಬಂದಿರುವುದಿಲ್ಲ.

ಆದ್ದರಿಂದ ಬೆಳೆಯನ್ನು ಪರಿಶೀಲಿಸಿ ನಮಗೆ ನ್ಯಾಯಯುತವಾದ ಬೆಳೆ ನಷ್ಟ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆಹೊಗಿದ್ದಾರೆ..

ಇನ್ನೂ ಡಾ‌.ಆರ್.ಎ. ದಯಾನಂದಮೂರ್ತಿ, ಮಾತನಾಡಿ,
ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾದ ಚಳ್ಳಕೆರೆ ತಾಲೂಕಿನಲ್ಲಿ 2023-24ನೇ ಸಾಲಿನ ಐದಾರು ದಶಕಗಳು ಕಂಡರೆಯದಂತಹ ಭೀಕರ ಕ್ಷಾಮ ತಲೆ ತೋರಿದ್ದರಿಂದ ಚಳ್ಳಕೆರೆ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು, ರಾಜ್ಯ ಸರ್ಕಾರ ಘೋಷಿಸಿದೆ ಚಳ್ಳಕೆರೆ ತಾಲೂಕಿನಲ್ಲಿ ಕನಿಷ್ಠ ಮಳೆ ಸುರಿಯದೆ ಅತಿ ಹೆಚ್ಚು ಅನಾವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ ಮಳೆಯಶ್ರಿತ ಶೇಂಗಾ ತೊಗರಿ ಮುಂತಾದ ಎಲ್ಲಾ ಬೆಳೆಗಳು ಒಣಗಿ ನೆಲ ಕಚ್ಚಿವೆ ಎಂಬುದನ್ನು ಕೃಷಿ ಸಚಿವರು ಬರಪೀಡಿತ ಪ್ರದೇಶಗಳಿಗೆ ವೀಕ್ಷಿಸಿದ ಸಂದರ್ಭದಲ್ಲಿ ವತದಿಯಾಗಿದೆ ಎಂದರು.

ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮಾ ಕಂಪನಿಯಿಂದ ಅನ್ಯಾಯವಾಗಿರುವುದು ಖಂಡನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘ ಅಧ್ಯಕ್ಷರಾದ ಡಾ.ಸಿ ಶಿವಲಿಂಗಪ್ಪ , ಉಪಾಧ್ಯಕ್ಷರಾದ ಕರಿಯಪ್ಪ , ಕಾರ್ಯದರ್ಶಿ ಎಸ್ ಪ್ರಕಾಶ್, ಡಾ‌.ಆರ್.ಎ. ದಯಾನಂದಮೂರ್ತಿ, ಭರತೇಶ್ ರೆಡ್ಡಿ ವಿ ಎಸ್ ಸಿದ್ದೇಶ್ವರ ರೆಡ್ಡಿ ಎಂ ಪ್ರಕಾಶ್ ಒಡೆಯರ್ ಜಿಎಂ ಸಂದೀಪ್ ಎಲ್ಐಸಿ ತಿಪ್ಪೇಸ್ವಾಮಿ ವೀರಣ್ಣ ಗೋಪನಹಳ್ಳಿ ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!