ಬೆಂಗಳೂರಿನ ಸರ್ಜಾಪುರದ ಕಾಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುತ್ತಾ ಕುಳಿತಿದ್ದ ಒಂದುವರೆ ವರ್ಷದ ಹಸುಳೆ
ಆಕಸ್ಮಿಕವಾಗಿ ತಂದೆಯೇ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಸಿಲುಕಿದ್ದು, ತಂದೆಯ ಗೋಳಾಟ ಹೇಳ ತೀರದ್ದಾಗಿತ್ತು. ಮೃತ ದುರ್ದೈವಿಯ
ಮನೀಷಾ ತಂದ ಬಾಲಕೃಷ್ಣ ಅವರ ಪುತ್ರಿ ಬಾಲಕೃಷ್ಣ ಇಚೇರ್ ವಾಹನ ಚಾಲನೆ ಮಾಡುತ್ತಿದ್ದು, ವಾಹನವನ್ನು ಹಿಂತೆಗೆದುಕೊಳ್ಳಲು
ಹೋದಾಗ ಮಗು ಮನೀಷಾ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಆದರೆ ಅಲ್ಲಿ ಚಿಕಿತ್ಸೆ ಫಲಿಸದ ಮನಿಷಾ ಕೊನೆಯುಸಿರೆಳೆದಿದ್ದಾಳೆ. ಸರ್ಜಾ ಪುರ ಪೋಲಿಸ್ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.