ಚಳ್ಳಕೆರೆ : ನೂತನವಾಗಿ ಚಳ್ಳಕೆರೆ ಪೊಲೀಸ್ ಠಾಣೆಗೆ ಆಗಮಿಸಿದ ಪೊಲೀಸ್ ಇನ್ಸೆಪೆಕ್ಟೆರ್ ಜಿಬಿ.ಉಮೇಶ್‌ರವರನ್ನು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ ಸೈಯದ್ ನಬಿ, ಹಾಗು ವಕೀಲರಾದ ಬೋರಣ್ಣ ಠಾಣೆಯಲ್ಲಿ ಹೂವು ಮಾಲೆ ಹಾಕಿ ಸ್ವಾಗತಿಸಿದರು.
ನಂತರ ಅಧಿಕಾರ ವಹಿಸಿಕೊಂಡ ಇನ್ಸೆಪೆಕ್ಟೆರ್ ಜಿಬಿ.ಉಮೇಶ್ ಮಾತನಾಡಿ, ನಗರದಲ್ಲಿ ಕಳ್ಳತನ, ಇಸ್ಪೀಟ್ ದಂಧೆಗೆ ಬ್ರೇಕ್ ಹಾಕಲಾಗುವುದು ಇಂತಹ ಪ್ರಕರಣಗಳು ನಗರದಲ್ಲಿ ಎಲ್ಲಿ ಕಂಡು ಬಂದರು ನಮ್ಮ ಗಮನಕ್ಕೆ ತಂದರೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುವುದು.
ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು, ಈಗಾಗಲೇ ಇರುವ ಸಿಬ್ಬಂದಿಯಿAದ ಗಸ್ತು ಹೆಚ್ಚಳ ಹಾಗು ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.