ಚಳ್ಳಕೆರೆ : ನ್ಯಾಯಾಲದಲ್ಲಿ ಪ್ರಕರಣ ಇದ್ದರು ಕೂಡ ಜಿ+2ವಸತಿ ನಿರ್ಮಾಣ ಮಾಡಲು ಈ ಯೋಜನೆ ಸಭೆಗೆ ತಂದಿರುವುದು ನ್ಯಾಯಾಲಕ್ಕೆ ಅಗೌರವ ತಂದ ಹಾಗೆ ಎಂದು ನಗರಸಭೆ ಸದಸ್ಯರಾದ ವಿ.ವೈ.ಪ್ರಮೋದ್, ಶ್ರೀನಿವಾಸ್, ಹೊಯ್ಸಳ ಗೊಂವಿದ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.


ಅವರು ನಗರದ ನಗರಸಭೆಯಲ್ಲಿ ಇಂದು ವಿಶೇಷ ಸಾಧಾರಣ ತುರ್ತು ಕೌನ್ಸ್ಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಈ ಯೋಜನೆ ಜನಪರವಾಗಿಲ್ಲ, ಇಂತಹ ಯೋಜನೆಯನ್ನು ಕೈಬಿಡಿ, 1008 ಮನೆಗಳ ಕಾಮಗಾರಿಗೆ ಕೇವಲ 100 ಜನ ಫಲಾನುಭವಿಗಳು ಆಸಕ್ತಿ ಇರುವುದು ಈ ಯೋಜನೆ ಸರಿಯಿಲ್ಲ ಎಂಬುದು ಗೋತ್ತಾಗುತ್ತಿದೆ, ಆದ್ದರಿಂದ ಸರಕಾರ ಇಂತಹ ಯೋಜನೆಗಳಿಗೆ ಹಣವನ್ನು ಹಾಕದೆ, ನÀಗರದ ವಿವಿಧ ವಾರ್ಡಗಳಿಗೆ ಸ್ವಚ್ಚತೆಗೆ ಹಾಕಿ, ಕಸದ ವಾಹನಗಳ ಖರೀದಿಗಳಿಗೆ ಹಾಕಿ, ಮುಕ್ತಿ ವಾಹನ ಖರೀದಿಸಿ, ಈಗೇ ನಗರದ ಸ್ವಚ್ಚ ಮಾಡುವ ಪೌರಕಾರ್ಮಿಕರ ಸಂಬಳ ಕೂಡ ಮೂರು ತಿಂಗಳಿAದ ಕೊಟ್ಟಿರಲಿಲ್ಲ ಆದರೆ ಎರಡು ದಿನಗಳ ಹಿಂದೆ ನೀಡಿದೆ, ಈಗೇ ನಗರಸಭೆ ಬೊಕ್ಕಸಕ್ಕೆ ನಷ್ಠವಾಗುವು ಇಂತಹ ಯೋಜನೆಗಳನ್ನು ಕೈ ಬಿಡಿ ಸಭೆಯಲ್ಲಿ ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.


ಪಾವಗಡ ರಸ್ತೆಯಲ್ಲಿರುವ ನಗರಸಭೆಯಿಂದ ಗುತ್ತಿಗೆ ನೀಡಿರುವ ಹೊಯ್ಸಳ ಬ್ಯಾಂಕ್ ಕಟ್ಟಡದ ಗುತ್ತಿಗೆ ಪದ್ದತಿ ರದ್ದಾಗಿದೆ, ಆದರೆ ಖಾಸಗಿ ವ್ಯಕ್ತಿಗಳು ಗುತ್ತಿಗೆಯಿಂದ ಮರು ಹತ್ತು ವರ್ಷಕ್ಕೆ ಮರು ಗುತ್ತಿಗೆ ನೀಡಿರುವ ಆರೋಪ ಕೇಳಿ ಬಂದಿದೆ ಆದರೆ ನಗರಸಭೆ ಅಧಿಕಾರಿಗಳು ಹಾಗೂ ಅಧ್ಯಕ್ಷರು ಇದರ ಬಗ್ಗೆ ಗಂಭಿರವಾಗಿ ಪರಿಗಣಿಸಿ ನಗರಸಭೆ ವ್ಯಾಪ್ತಿಯ ಕಟ್ಡಡ ಹಿಂಪಡೆಯಬೇಕು ಎಂದು ನಗರಸಭೆ ಸದಸ್ಯ, ವಿ.ವೈ.ಪ್ರಮೋದ್, ಶ್ರೀನಿವಾಸ್, ವೆಂಕಟೇಶ್, ಹೊಯ್ಸಳ ಗೊಂವಿದ್ ಸಭೆಯಲ್ಲಿ ಒತ್ತಾಯಿಸಿದರು.


ನಾಮ ನಿದೇರ್ಶನ ಸದಸ್ಯ ಹೊಸಮನೆ ಮಂಜುನಾಥ್ ಮಾತನಾಡಿ, ನಗರಸಭೆ ವ್ಯಾಪ್ತಿಯ ಮಹಾ ಲಕ್ಷಿö್ಮ ಹಳೆ ಟಾಕೀಸ್ ಸುತ್ತಲು ಇರುವ ನಾಲ್ಕು ಮಳಿಗೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಬಾಡಿಗೆ ನಿಡಿದ್ದೀರಾ ಅಥವಾ ಸುಮ್ಮನೆ ಗೊತ್ತಿಲ್ಲದೆ ಇದ್ದೀರಾ ಎಂದು ಸಭೆಯ ಗಮನಹರಿಸಿದರು,.


ಇನ್ನೂ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಪೌರಾಯುಕ್ತ ವಾಸಿಮ್, ಸದಸ್ಯ ಎಂ.ಜಯಣ್ಣ, ಪ್ರಶಾಂತ್, ಕವಿತಾ, ಸುಮಾ, ಇತರರು ಇದ್ದರು.


ಇಂದು ಸಭೆಯಲ್ಲಿ ಬಹು ಸಂಖ್ಯಾತ ಸದಸ್ಯರು ಸಭೆಗೆ ಗೈರಾಗಿರುವುದು ಕಂಡು ಬಂದಿತು,

About The Author

Namma Challakere Local News
error: Content is protected !!