ನಗರಸಭೆ ನಾಮ ನಿರ್ದೇಶನ ಸದಸ್ಯರಾದ ನೇತಾಜಿ ಆರ್ ಪ್ರಸನ್ನ ಅವರ ಮನವಿಯಂತೆ ಚಳ್ಳಕೆರೆ ನಗರದ ಚಿತ್ರದುರ್ಗ ಮುಖ್ಯರಸ್ತೆಯಿಂದ ಬಾಪೂಜೆ ಕಾಲೇಜು ರಸ್ತೆಯ ಬಿಎಸ್ಎನ್ಎಲ್ ಟವರ್ ಗೆ ಬಿವಿ.ಸಿರಿಯಣ್ಣ ಮಾಸ್ಟರ್ ಎಂದು ನಾಮಕರಣ ಮಾಡಲು ಕೇಳಿಕೊಂಡಿರುವ ಬಗ್ಗೆ ಸಭೆ ಗಮನಕ್ಕೆ ತಂದಾಗ ವಾರ್ಡ್ ನ ಸದಸ್ಯರಾದ ಎನ್ ಜಯಣ್ಣ ಆಕ್ರೋಶ ವ್ಯಕ್ತಪಡಿಸಿ ಜನಗಳಿಂದ ಚುನಾಯಿತರಾಗಿ ಸದಸ್ಯರಾಗಿ ಇರುವಂತಹ ನಮ್ಮ ಗಮನಕ್ಕೆ ತಾರದೆ ಕೆಲವರು ರಸ್ತೆ, ವೃತ್ತಗಳಿಗೆ ಮನವಿ ಮಾಡಿಕೊಳ್ಳುವುದು ಅಪಹಾಸ್ಯ , ಆದ್ದರಿಂದ ವಾರ್ಡ್ ನ ಸದಸ್ಯರಾದ ನಾವುಗಳು
ಮಾಜಿ ಸಚಿವ ಡಿ.ಮಂಜುನಾಥ್ ಇವರು ಹೆಸರು ನಾಮಕರಣ ಮಾಡಿ ಎಂದಾಗ ಅಧ್ಯಕ್ಷರು ಮುಂದಿನ ಸಭೆಗೆ ತನ್ನಿ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷರಾದ ಕವಿತಾ ವಿರೇಶ್ ಸದಸ್ಯ ಜಯಣ್ಣ ರವರಿಗೆ ಸಾಥ್ ನೀಡಿದರು.

