ಚಳ್ಳಕೆರೆ ‌: ಕಳೆದು ಹಲವಾರು ದಿನಗಳಿಂದ ಪೋಲಿಸ್ ರ ನಿದ್ದೆಗೆಡಿಸಿದ ಬೈಕ್ ಕಳ್ಳ ಕೊನೆಗೆ ಪೋಲೀಸ್ ರ ಅತಿಥಿಯಾಗಿದ್ದಾನೆ.

ಚಳ್ಳಕೆರೆ ತಾಲೂಕಿನಲ್ಲಿ ಪ್ರತಿನಿತ್ಯವೂ ಒಂದಿಲ್ಲೊಂದು ಸ್ಥಳದಲ್ಲಿ ಬೈಕ್ ಕಳುವು ಹಾಗುವ ಪ್ರಕರಣಗಳಿಗೆ ರೋಸಿ ಹೊದ ಖಾಖಿಪಡೆ ಬೈಕ್ ಕಳ್ಳನಿಗಾಗಿ ವಿಶೇಷ ತಂಡ ರಚನೆ ಮಾಡಿ ಬೈಕ್ ಕಳ್ಳತನ ಮಾಡುವ ಕಳ್ಳನನ್ನು ಹಿಡಿದು ಅವನಿಂದ ಸುಮಾರು 34 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೂತನ ಡಿವೈಎಸ್ ಪಿ ಸತ್ಯನಾರಾಯಣ ರಾವ್ ಮಾಹಿತಿ ನೀಡಿದ್ದಾರೆ.

ಇನ್ನೂ ಹಗಲು ರಾತ್ರಿ ಎನ್ನದೆ ಕಳ್ಳನ ಹಿಂದೆ ಬಿದ್ದ ಖಾಕಿಪಡೆ ರಾಜ್ಯದ ವಿವಿಧ ಭಾಗಗಳಲ್ಲಿ ಕದ್ದ ಬೈಕ್ ಗಳನ್ನು ಮಾರಾಟ ಮಾಡಿ ಬರುತ್ತಿದ್ದ. ಇದನ್ನು ಪತ್ತೆ ಹಚ್ಚಿದ ಇನ್ಸ್ಪೆಕ್ಟರ್ ಕೆ.ಕುಮಾರ್ ನೇತೃತ್ವದ ತಂಡ ಕಳೆದ ಹಲವು ದಿನಗಳಿಂದ ಕಳ್ಳನ ಹಿಂದೆ ಹಲವು ಗ್ರಾಮಗಳನ್ನು ಸುತ್ತಿ 14 ಲಕ್ಷ ರೂಪಾಯಿಗಳ ಮೌಲ್ಯದ 34 ವಿವಿಧ ಕಂಪನಿಗಳ ಬೈಕ್ ಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಬೈಕ್ ಕದಿಯುತ್ತಿದ್ದ ಆರೋಪಿ ಹಿರಿಯೂರು ಮೂಲದ ಮಹಮ್ಮದ್ ಷರೀಪ್ ಎಂಬುವವರು ಎಂದು ಗುರುತಿಸಲಾಗಿದೆ.

ಇನ್ನೂ ಅತೀ ಶೀಘ್ರದಲ್ಲೇ ತನಿಖೆ ಮಾಡಿ ಬೈಕ್ ಗಳನ್ನು ವಶಪಡಿಸಿಕೊಂಡ ತಂಡಕ್ಕೆ , ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಅದೀಕ್ಷಕರಾದ ಆರ್ .ಶಿವಕುಮಾರ್, ಚಳ್ಳಕೆರೆ ಪ್ರಬಾರ ಡಿವೈಎಸ್ ಪಿ ಉಮೇಶ್ ಈಶ್ವರ ನಾಯ್ಕ್, ಚಳ್ಳಕೆರೆ ನೂತನ ಡಿವೈಎಸ್ ಪಿ ಎಂ.ಜೆ.ಸತ್ಯನಾರಾಯಣ ರಾವ್, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಆರೋಪಿ ಪತ್ತೆಗೆ ಪಿ.ಎಸ್.ಐ ಈರೇಶ್‌, ಶಿವರಾಜ್.ಜೆ
ಧರೇಪ್ಪ.ಬಿ.ದೊಡಮನಿ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ರಾಘವರೆಡ್ಡಿ, ವಸಂತ್‌ ಕುಮಾರ್,
ವೆಂಕಟೇಶ್, ಶ್ರೀನಿವಾಸ, ಶಿವಕುಮಾರ್, ಮಂಜುನಾಥ, ಪರಶುರಾಮ, ಶ್ರೀಧರ ಧರಣವರ್, ರಮೇಶ ಬಾರ್ಕಿ, ಅಶೋಕ್ ರೆಡ್ಡಿ, ಮಂಜುನಾಥ್,
ತಿರುಕಪ್ಪ ತಳವಾರ್, ಬಸವರಾಜ್ ರವರನ್ನು ಒಳಗೊಂಡ ತಂಡವನ್ನು ಪತ್ತೆಗೆ ನೇಮಿಸಿದ್ದು,

34 ಮೋಟಾರ್ ಸೈಕಲ್ ಗಳು ಕಳುವಾಗಿದ್ದ ಬಗ್ಗೆ ಕೆಳಕಂಡಂತೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ
ಪ್ರಕರಣಗಳಲ್ಲಿನ ವಾಹನಗಳು ಪತ್ತೆಯಾಗಿರುತ್ತವೆ.
ಚಳ್ಳಕೆರೆ ಪೊಲೀಸ್‌ ಠಾಣೆ 06 ಪ್ರಕರಣ,
ಚಿತ್ರದುರ್ಗ ನಗರ ಠಾಣೆ
02 ಪ್ರಕರಣ,
ಹೊಸದುರ್ಗ ಠಾಣೆ 4,
ಹೊಳಲ್ಕೆರೆ ಠಾಣೆ
02 ಪ್ರಕರಣ ಗಳು,
ಚಿತ್ರದುರ್ಗ ಬಡಾವಣೆ ಠಾಣೆ
01 ಪ್ರಕರಣ,
ಹಿರಿಯೂರು ನಗರ ಠಾಣೆ
01 ಪ್ರಕರಣ,
ತುಮಕೂರು ಜಿಲ್ಲೆಯ
06 ಪ್ರಕರಣಗಳು,
ದಾವಣಗೆರೆ ಜಿಲೆಯ
03 ಪ್ರಕರಣಗಳು,
ಶಿವಮೊಗ್ಗ ಜಿಲ್ಲೆಯ 02 ಪ್ರಕರಣ ಗಳು ,
ಚಿಕ್ಕಮಗಳೂರು ಜಿಲೆಯ 01 ಪ್ರಕರಣ,

06 ಮೋಟಾರ್ ಸೈಕಲ್ ಗಳ ಬಗ್ಗೆ ವಿವರ ಪಡೆಯಬೇಕಾಗಿರುತ್ತದೆ ಒಟ್ಟು 34 ಮೋಟಾರ್ ಸೈಕಲ್ ಗಳು ದಸ್ತಗಿರಿ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

About The Author

Namma Challakere Local News
error: Content is protected !!