ಮಹರ್ಷಿ ವಾಲ್ಮೀಕಿ ಮನುಕುಲಕ್ಕೆ ಆದರ್ಶ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಸಲಹೆ.

ನಾಯಕನಹಟ್ಟಿ:: ಮಹಾಋಷಿ ವಾಲ್ಮೀಕಿ ರವರ ತತ್ವ ಸಿದ್ಧಾಂತಗಳನ್ನ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳಾ ಶ್ರೀಕಾಂತ್ ಹೇಳಿದರು.

ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಹಾಋಷಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಹಾಋಷಿ ವಾಲ್ಮೀಕಿ ಸಮಸ್ತ ಮನುಕುಲಕ್ಕೆ ಆದರ್ಶ ಹಾಗಾಗಿ ಅವರಿಂದ ರಚಿತಗೊಂಡಿರುವ ರಾಮಾಯಣದ ಮೂಲ ಮಂತ್ರ ಅರಿಯಬೇಕು ಎಂದು ತಿಳಿಸಿದರು.

ಸದಸ್ಯ ಸರ್ವಮಂಗಳ ಉಮಾಪತಿ ಮಾತನಾಡಿದರು. ಮನುಕುಲಕ್ಕೆ ಮಹಾಋಷಿ ವಾಲ್ಮೀಕಿ ಅವರು ರಾಮಾಯಣ ಕೃತಿ ಉತ್ತಮ ಕೊಡುಗೆ ಇಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಾಯಣದಿಂದ ತಿಳಿದು ಬರುತ್ತದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯ ಸೈಯದ್ ಅನ್ವರ್ ಮಾತನಾಡಿದರು. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹಾಋಷಿ ವಾಲ್ಮೀಕಿ ರವರಿಗೆ ಸಲ್ಲುತ್ತದೆ ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಉಪಾಧ್ಯಕ್ಷ ಬೋಸಮ್ಮ ಮಂಜುನಾಥ್ ಮಾತನಾಡಿದರು ಮಹಾಋಷಿ ವಾಲ್ಮೀಕಿ ರವರು ಆದಿ ಕವಿ ಎಂದು ಪ್ರಸಿದ್ಧರಾಗಿದ್ದಾರೆ ಅವರು ಬರೆದ ರಾಮಾಯಣ ಮಹಾ ಕಾವ್ಯ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು.

ಇದೇ ಸಂದರ್ಭದಲ್ಲಿ ಸದಸ್ಯರಾದ ಪಾಪಮ್ಮ, ಪಿ ಓಬಯ್ಯ ದಾಸ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ದ್ವಿತೀಯ ದರ್ಜೆ ಸಹಾಯಕ ಟಿ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಶ್, ಸಿಬ್ಬಂದಿಗಳಾದ ದಯಾನಂದ್, ಅಭಿಷೇಕ್, ರತ್ನಮ್ಮ, ಲತಾ, ರೇಣುಕಾಮ್ಮ, ಶ್ವೇತಾ, ಆಶಾ, ಇದ್ದರು.

About The Author

Namma Challakere Local News
error: Content is protected !!