ಚಳ್ಳಕೆರೆ : ಟೀಕೆ ಮಾಡುವರು‌ ಸದಾ ಇರುತ್ತಾರೆ ಆದರೆ ನಮ್ಮ ಧ್ಯೇಯ ಉದ್ದೇಶ, ಒಳ್ಳೆಯದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ತಿಳಿಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದಲ್ಲಿ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಭಿವೃದ್ದಿಗಾಗಿ ಅಡ್ಡವಾಗಿರುವ ಮರಗಳನ್ನು ತೆಗೆಸಿರುವುದರಿಂದ ಬಿಜೆಪಿ ಮುಖಂಡರು ಆರೋಪ
ಮಾಡುತ್ತಿದ್ದಾರೆ ಎನ್ನುವ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಗರದಲ್ಲಿ ಇಂದೆಂದು ಕಾಣದಂತ ಅಭಿವೃದ್ಧಿ ಮಾಡಿರುವುದು ವಿರೋಧ ಪಕ್ಷದವರೆ ಹೇಳುತ್ತಿರುವಾಗ , ಅವರ ಟೀಕೆಗೆ ನಾನು ಉತ್ತರ ಕೊಡುವುದಿಲ್ಲ , ಕಾಲೇಜಿನ ಅಭಿವೃದ್ಧಿಗೆ ಕೆಲವೆ ಕೆಲವು ಮರಗಳು ಅಡ್ಡಲಾಗಿ ಇರುವ ಕಾರಣ ತೆಗೆಸಿದೆ, ಆದರೆ ಅದರ ಮೂರು ಪಟ್ಟು ಮರಗಳನ್ನು ನೆಡುವುದು ನಮ್ಮ ಗುರಿಯಾಗಿದೆ, ಪ್ರಸ್ತುತ ನಗರದ ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜು” ನ್ಯಾಕ್ ಬಿ”.ಇದೆ , ಇದನ್ನು ನ್ಯಾಕ್ “ಎ” ಗ್ರೇಡ್ ಗೆ ಕೊಂಡೊಯ್ಯುಬೇಕಾದರೆ ಕಾಲೇಜಿನ‌ ಮೂಲ ಭೂತ ಸೌಕರ್ಯಗಳು ಅಗತ್ಯ, ಅದರ ವಿನ್ಯಾಸ, ಕಟ್ಟಡ ಇದ್ದರೆ ಮಾತ್ರ ನಮ್ಮ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ, ಆದ್ದರಿಂದ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ,
ಹಂಪಿ ಯುನಿವರ್ಸಿಟಿ ಯಿಂದ ಸಂಶೋಧನಾ ಮಾನ್ಯತ ಕೇಂದ್ರ, ಸಮಾಜ‌ ಶಾಸ್ತ್ರ, ಇತಿಹಾಸ, ಕನ್ನಡ,ರಾಜಕೀಯ ಶಾಸ್ತ್ರಿ ವಿಭಾಗದ ವಿದ್ಯಾರ್ಥಿಗಳು ಇಲ್ಲಿಯೆ ಪಿಎಚ್ ಡಿ ಪದವಿ ಪಡೆದುಕೊಳ್ಳಬಹುದು, ಇನ್ನೂ ಏಕ ಕಾಲದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿಶಾಲವಾದ ಗಾಳಿ, ಬೆಳಕು ಇರುವ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿದೆ, ಇನ್ನೂ ಕಾಲೇಜಿನ ಅಂದಕ್ಕೆ ರಾಜಮಂಡ್ರಿಯಿಂದ ಪಾಕ್ಸ್ ಟೈಲ್ಸ್ ಪಾಟ್ರಿ ಗಿಡಗಳನ್ನು ನೆಡಲಾಗುತ್ತದೆ,
ಆದ್ದರಿಂದ ಕಾಲೇಜು ಕಟ್ಟಡಕ್ಕೆ ಗ್ರಂಥಾಲಯಕ್ಕೆ, ಆಡಿಟೋರಿಯಂ ಗೆ ಕ್ರೀಡಾಂಗಣಕ್ಕೆ ತೆರಳಲು ಸಾವಿರಾರು ವಿದ್ಯಾರ್ಥಿಗಳು ಒಂದೇ ಬಾರಿ ಹೊಗಲು , ಹಾಗೂ ಒಳ ಬರಲು ವಿಶಾಲವಾದ ರಸ್ತೆ, ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಈ ಕಾಲೇಜಿನ‌ ಕಟ್ಟಡದ ವಿನ್ಯಾಸ ರೂಪಿಸಲಾಗಿದೆ. ಆದ್ದರಿಂದ ವಿಶಾಲವಾದ ಗಾರ್ಡನ್, ಪಾರ್ಕಿಂಗ್, ರಸ್ತೆ, ಈಗೇ ಎಲ್ಲಾ ಸೌಲಭ್ಯಗಳು ಇರುವಂತೆ ಮಾಡಿದೆ, ಎನ್ನುತ್ತಾರೆ ಶಾಸಕ ಟಿ.ರಘುಮೂರ್ತಿ.

About The Author

Namma Challakere Local News
error: Content is protected !!