ಚಳ್ಳಕೆರೆ : ನಗರದಲ್ಲಿ ಅಭಿವೃದ್ಧಿ ಹೆಸರಲ್ಲಿ ಹೆಮ್ಮರವಾಗಿ ಬೆಳೆದ ಮರಗಳನ್ನು ಕಡಿದು ಮಾರಣಹೋಮ ಮಾಡುವ ಅಧಿಕಾರಿಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಿಜೆಪಿ ನಿಯೋಗ ದಾವಿಸಿ ಮರಗಳ ಕಡಿದ ಸ್ಥಳದಲ್ಲಿ ಕ್ಷೇತ್ರದ ಜನಪ್ರತಿನಿಧಿಗಳ ವಿರುದ್ಧ, ಜಿಲ್ಲಾ ಆಡಳಿತ,ತಾಲೂಕು ಆಡಳಿತ,ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಿಡಿಕಾರಿದ್ದಾರೆ.
ಜಿಲ್ಲಾಧ್ಯಕ್ಷ ಕೆಟಿ.ಕುಮಾರಸ್ವಾಮಿ ಮಾತನಾಡಿ, ಕಾಲೇಜ್ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪರಿಶ್ರಮದಿಂದ ನೆಟ್ಟ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ನೆರಳಿನ ಆಸರೆಯಾಗಿ ಕಾಲೇಜ್ ಕ್ಯಾಂಪಸ್ ಗೆ ಮೆರಗು ತಂದಿದವು, ಆದರೆ ಅಭಿವೃದ್ಧಿ ಹೆಸರಿನಲ್ಲಿ ಕಾಲೇಜಿನ ಕಟ್ಟಡ ಮುಖ್ಯರಸ್ತೆಗೆ ಕಾಣಲು ಸು.ಇಪ್ಪತ್ತು ವರ್ಷಗಳಿಂದ ಬೆಳೆದ ಮರಗಳನ್ನು ಕಡಿದಿರುವುದು ನೋವಿನ ಸಂಗತಿ ಇದರ ಹೊಣೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೊರಬೇಕು, ಇಂತಹ ಘಟನೆಗಳು ಎಲ್ಲೆ ನಡೆದರೂ ಶಾಸಕರೆ ಉತ್ತರ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.
ಇನ್ನೂ ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಕೇವಲ ಕಾಲೇಜು ಕಟ್ಟಡ ಕಾಣಲೆಂದು ಮರಗಳನ್ನು ಕಡಿಸುವುದು ಶಾಸಕರಿಗೆ ಶೋಭೆಯಲ್ಲ, ಗಿಡಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಬಹುದಾಗಿತ್ತು, ಇದರಿಂದ ಸಾವಿರಾರು ವಿದ್ಯಾರ್ಥಿಗಳು ಬೆಳೆಸಿದ ಮರಗಳು ಕಣ್ಣಾಮುಂದೆ ನೆಲಕ್ಕೆ ಉರುಳಿದ್ದರಿಂದ ಪರಿಸರ ಪ್ರೇಮಿಗಳ ಆಕ್ರೋಶ ಮುಗಿಲು ಮುಟ್ಟಿದೆ, ಇನ್ನೂ ಶಾಲಾ ಅಭಿವೃದ್ಧಿ ಸಮಿಗಳಿಗೆ, ಕಾಲೇಜು ಸಿಡಿಸಿ ಸಮಿತಿಗೆ ಆಯಾ ಮುಖ್ಯ ಶಿಕ್ಷಕರು, ಮಕ್ಕಳ ಪೋಷಕರು ಅಧ್ಯಕ್ಷರಾಗುವುದು ಕಂಡಿದ್ದೆವೆ, ಆದರೆ ವಿವಿಧ ಶಾಲಾ ಕಾಲೇಜುಗಳಿಗೆ ತಾವೇ ಅಧ್ಯಕ್ಷರಾಗಿವುದು ಯಾವ ಉದ್ದೇಶಕ್ಕೆ , ಯಾವ ಕಾರಣಕ್ಕೆ ಎಂಬುದು ಸಾರ್ವಜನಿಕರ ಮುಂದೆ ಉತ್ತರಿಸಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್, ಮಾತನಾಡಿದರು, ಇದೇ ಸಂಧರ್ಭದಲ್ಲಿ
ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ಯುವ ಮೋರ್ಚ ಜಿಲ್ಲಾಧ್ಯಕ್ಷ ಪಾಲಯ್ಯ, ಮೆಣಸಿನಕಾಯಿ ತಿಪ್ಪೇಸ್ವಾಮಿ, ನವೀನ್, ಮೋಹನ್, ಬಂಡೆ ರುದ್ರಣ್ಣ, ರುದ್ರಮುನಿ, ಶ್ರೀನಿವಾಸ್, ಇತರರು ಪಾಲ್ಗೊಂಡಿದ್ದರು.


