ಚಳ್ಳಕೆರೆ : ಚಳ್ಳಕೆರೆ: ಬ್ಯಾಂಡೇಜ್ ಇಲ್ಲದೆ ರೋಗಿಗಳ ಪರದಾಟ
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯ
ಜೊತೆಗೆ ಸುಮಾರು ವರ್ಷದಿಂದ ಗಾಯಗಳಿಗೆ ಬ್ಯಾಂಡೇಜ್ ಬಟ್ಟೆ
ಲಭ್ಯವಿಲ್ಲ. ಇದರಿಂದಾಗಿ ರೋಗಿಗಳು ಹೊರಗಿನ ಖಾಸಗಿ ಔಷಧ
ಅಂಗಡಿಗಳಿಂದ ಬ್ಯಾಂಡೇಜ್ ಖರೀದಿಸಿ ತಂದರೆ ಮಾತ್ರ ಚಿಕಿತ್ಸೆ
ನೀಡಲಾಗುತ್ತದೆ ಎಂದು ರೋಗಿಗಳು ಇಂದು ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಲೆಕ್ಕಕ್ಕಿಲ್ಲದಂತಾಗಿದ್ದು, ಜನರಿಗೆ ಆರೋಗ್ಯ
ಭಾಗ್ಯ ಮರಿಚಿಕೆಯಾಗಿದೆ.

