ಚಳ್ಳಕೆರೆ : ಹೊಸದುರ್ಗ: ಕಂಚೀವರದ ಸ್ವಾಮಿಗೆ ಹಣ ತೂರಿ ಹರಕೆ
ತೀರಿಸಿದ ಭಕ್ತರು
ಹೊಸದುರ್ಗದ ಕಂಚೀಪುರದಲ್ಲಿ ನಡೆದ ದುಡ್ಡಿನ ದೇವರೆಂದೇ
ಪ್ರಸಿದ್ಧ ಪಡೆದ ಕಂಚೀವರದ ಸ್ವಾಮಿ ಜಾತ್ರೆಯಲ್ಲಿ, ಭಕ್ತರು
ದೇವರ ಮೇಲೆ ಚಿಲ್ಲರೆ ಹಣವನ್ನು ಎಸೆದು ತಮ್ಮ ಭಕ್ತಿಯನ್ನು
ಸಮರ್ಪಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದ
ಭಕ್ತರು, ತಮ್ಮ ಹರಕೆ ಈಡೇರಿಸಿದ ದೇವರಿಗೆ ಹಣ ಎಸೆದು ಹರಕೆ
ತೀರಿಸಿದರು. ಇದು ಭಕ್ತಿಯ ಪರಾಕಾಷ್ಠೆಯನ್ನು ತೋರಿಸುವ ವಿಶಿಷ್ಟ
ಆಚರಣೆಯಾಗಿದೆ.

