ಚಳ್ಳಕೆರೆ :

ಕರ್ನಾಟಕ ರತ್ನ, ದಂತೆ ಕಥೆ ನಿರ್ಮಿಸಿದ ಮೇರು ನಟ ಡಾ/ ವಿಷ್ಣುವರ್ಧನ್ ರವರ ಜನ್ಮದಿನಾಚರಣೆ,

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದ ಎದುರು ವಾರ್ಡ್, ನಂ, 11 – 12ನೇ ಹೌಸಿಂಗ್ ಬೋರ್ಡ್ ಕಾಲೋನಿಯನ್ನು ಡಾಕ್ಟರ್ ವಿಷ್ಣುಸೇನಾ ಬಳಗ ಈ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರವರ ನಾಮಫಲಕ ನಿರ್ಮಿಸಿ ಉದ್ಘಾಟಿಸಿ ಸಾಹಿತಿ ತಿಪ್ಪಣ್ಣ ಮರಿಕುಂಟೆ ರವರು ಮಾತನಾಡಿದರು,

ಅಭಿನವ ಭಾರ್ಗವ, ಸಾಹಸ ಸಿಂಹ, ಮರಣೋತ್ತರ ಕರ್ನಾಟಕ ರತ್ನ, ದಂತೆ ಕಥೆ ನಿರ್ಮಿಸಿದ, ಡಾ/ ವಿಷ್ಣುವರ್ಧನ್ ರವರು ಎಚ್ ಎಲ್ ನಾರಾಯಣ್ ರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನ ಚಾಮುಂಡಿ ನಗರದಲ್ಲಿ ಜನಿಸಿದರು, ಇವರ ತಂದೆ ಮೂಲತಹ ಕಲಾವಿದರು ಹಾಗೂ ಸಂಗೀತ ನಿರ್ದೇಶಕರು ಸಂಭಾಷಣೆ ಕಾರರು, ಆಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ, ಈ ಹಿನ್ನಲೆ ಡಾ/ ವಿಷ್ಣುವರ್ಧನ್ ರವರು 1955 ರಲ್ಲಿ ಶಿವಶರಣ ನಂಬಕ್ಕ ಎಂಬ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿರುತ್ತಾರೆ, ಅಲ್ಲವೇ ಇವರು ಪ್ರಬುದ್ಧಕ್ಕೆ ಬಂದಾಗ 1972 ರಲ್ಲಿ ಪುಟ್ಟಣ್ಣ ಕಣಗಲ್ ನಿರ್ಮಿಸಿದ ನಾಗರಹಾವು ಚಿತ್ರದಲ್ಲಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿ ಕರ್ನಾಟಕದ ಹೆಮ್ಮೆಯ ಮಗನಾಗಿದ್ದಾನೆ, ಈ ನಿಟ್ಟಿನಲ್ಲಿ ಇವರು ನೂರಾರು ಚಿತ್ರಗಳಲ್ಲಿ ನಟಿಸಿ ಸಾರ್ವಭೌಮತ್ವವನ್ನು ಚಿತ್ರರಂಗದಲ್ಲಿ ತಮ್ಮ ಆದ ಚಾಕು ಚಕ್ಕೇತಿಯನ್ನು ಮೂಡಿಸಿದ್ದಾರೆ ಇಂತಹ ಮಹನೀಯರ ಆದರ್ಶಗಳನ್ನು ನಾವು ಕಲಿತು ಇವರ ಪುಣ್ಯ ಸ್ಮರಣೀಯ ದಿನಾಚರಣೆಯನ್ನು ಇಂದು ಚಳ್ಳಕೆರೆಯಲ್ಲಿ ವಿಷ್ಣು ಸೇನಾ ಬಳಗದ ಯುವಕರು ಈ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆಯಾಗಿ ನಿರ್ಮಿಸಿದ್ದಾರೆ, ಇದು ನಮ್ಮ ನಿಮ್ಮ ಎಲ್ಲರ ಹೆಮ್ಮೆ ತರುವಂತ ಕೆಲಸವನ್ನು ವಿಷ್ಣು ಬಳಗ ಸೇನೆಯ ಯುವಕರು ಮಾಡಿದ್ದಾರೆ ಎಂದು ತಿಳಿಸಿದರು,

ಇನ್ನು ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಪತ್ರಕರ್ತ ಕೊರಳಕುಂಟೆ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ವಿಶುಕುಮಾರ್, ಮಾನವ ಹಕ್ಕುಗಳ ಆಯೋಗದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಆಮ್ ಆರ್ಮಿ ಪಕ್ಷದ ದೂರಿಣ ಪಾಪಣ್ಣ, ವಿಷ್ಣು ಸೇನಾ ಬಳಗದ ಅಧ್ಯಕ್ಷ ರಘು, ಮಲ್ಲಿಕಾರ್ಜುನ್, ಪೊಲೀಸ್ ಇಲಾಖೆಯ ತಿಲಕ್, ರಾಮಾಚಾರಿ, ಸೇರಿದಂತೆ ಅನೇಕ ವಿಷ್ಣುಸೇನಾ ಬಳಗದ ಯುವಕರು ಹಾಜರಿದ್ದರು

About The Author

Namma Challakere Local News
error: Content is protected !!