ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಆಯ್ಕೆ

ಉಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಚಳ್ಳಕೆರೆ ಮುಸ್ಲಿಂ ಸಮುದಾಯ

ಚಳ್ಳಕೆರೆ: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ರವರಿಗೆ ಉಚ್ಚ ನ್ಯಾಯಾಲಯ ಅನುಮತಿ ನೀಡುವ ಮೂಲಕ ಸಂವಿಧಾನದ ಆಶಯಗಳಿಗೆ ಮನ್ನಣೆ ನೀಡಿದೆ ಎಂದು ಚಳ್ಳಕೆರೆ ಮುಸ್ಲಿಂ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. 

ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ ಹೆಚ್ಎಸ್ ಸೈಯದ್ ಖ್ಯಾತ ಲೇಖಕಿ ಬಾನು ಮುಸ್ತಾಕ್ ರವರು ನಾಡ ಹಬ್ಬ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಬಾರದು ಎಂದು ಕೆಲ ಸಂಕುಚಿತ ಮನೋಭಾವದ ಹಾಗೂ ಜಾತ್ಯತೀತ ವಿರೋಧಿ ಭಾವನೆ ಉಳ್ಳಂತಹ ವ್ಯಕ್ತಿಗಳು ಉಚ್ಚ ನ್ಯಾಯಾಲಯದ ಮೊರೆ ಹೋಗಿ ತಡೆಯಾಗ್ನೆ ತರಲು ಪ್ರಯತ್ನಿಸಿದ್ದರು ನ್ಯಾಯಾಲಯವು ಅರ್ಜಿಯನ್ನು ವಿಚಾರಣೆ ನಡೆಸಿ ಭಾರತ ದೇಶ ಜಾತ್ಯತೀತ ವ್ಯವಸ್ಥೆಯನ್ನು ಹೊಂದಿದೆ ರಾಜ್ಯ ಸರ್ಕಾರ ಸಂವಿಧಾನಾತ್ಮಕವಾಗಿ ಕೈಗೊಂಡಿರುವ ತೀರ್ಮಾನವನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳ ಅಡಿಯಲ್ಲಿ ನ್ಯಾಯ ಸಮ್ಮತ ತೀರ್ಪನ್ನು ನೀಡಿರುವುದಕ್ಕೆ ಚಳ್ಳಕೆರೆ ಮುಸ್ಲಿಂ ಸಮುದಾಯ ತೀರ್ಪನ್ನು ಸ್ವಾಗತಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಅನ್ವರ್ ಮಾಸ್ಟರ್ ಎಂ ದಾದಾಪೀರ್ ಮೊಹಮ್ಮದ್ ಆಯುಬ್ ಸಿಆರ್ ಅಲ್ಲಾಭಕ್ಷಿ ಬಾಬು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!