ಚಳ್ಳಕೆರೆ :

ಸಂಘದ ಕಾರ್ಯ ಚಟುವಟಿಕೆಗಳು ಹಾಗೂ ಹಾಲು ಉತ್ಪಾದನೆಯಿಂದ ಸಂಘಕ್ಕೆ ಉತ್ತಮ ಲಾಭಾಂಶವು ಒಳ್ಳೆಯ ಪ್ರಶಂಸೆಗೆ ಕಾರಣವಾಗಿದೆ ಎಂದು ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ಹೇಳಿದರು.

ಅವರು ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ 2024- 25 ನೆ ಸಾಲಿನ ವಾರ್ಷಿಕ ಸಾಮಾನ್ಯಸಭೆ ಯನ್ನುಸಂಘದ ಅಧ್ಯಕ್ಷರಾದ ಭಾಗ್ಯಮ್ಮ ಇವರ ಘನ ಅಧ್ಯಕ್ಷತೆಯಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು,

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರು ಹಾಗೂ ಆಡಳಿತ ಮಂಡಳಿ ಅವರಿಂದ ಬಿ ಎಂ ಸಿ ಕಟ್ಟಡ ದ ಬೇಡಿಕೆ ಇಟ್ಟರು,

ಈ ಸಂದರ್ಭದಲ್ಲಿ ನಿರ್ದೇಶಕರು ಸಂಘಕ್ಕೆ ಎಚ್ಚಿನ ಹಾಲು ಬರುತ್ತಿರುವ ಕಾರಣ ಹಾಗೂ ಸಂಘ ದಲಿ ಜಾಗವಿರುವುದರಿಂದ ಇಲ್ಲಿಗೆ ಬಿಎಂಸಿ. ಕಾರ್ಯರೂಪಕ್ಕೆ ತರುವ ಭರವಸೆಯನ್ನು ತಿಳಿಸಿದರು ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚಿನ ಹಾಲು ಹಾಕಿದ ಉತ್ಪಾದಕರಿಗೆ ಸಂಘದ ಪರವಾಗಿ ನಿರ್ದೇಶಕರು ಬಹುಮಾನವನ್ನು ವಿತರಿಸಿದರು ಈ ಸಂದರ್ಭದಲ್ಲಿ ತಾಲೂಕಿನ ಆದಿವಾಲ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರು ಭೇಟಿ ನೀಡಿ ಸಂಘದ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿಗಳಾದ ಶ್ರೀ ಎಂ. ಪುಟ್ಟರಾಜರವರು. ಮಾರ್ಗ ವಿಸ್ತರಣಾಧಿಕಾರಿಯಾದ sg ಕೃಷ್ಣಕುಮಾರ್.ಮಂಜುನಾಥ್ ಪಟ್ರೆಹಳ್ಳಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಅಧಿವಾಲ ಸಂಘದ ಅಧ್ಯಕ್ಷರಾದ ದೈವಾನಮ್ಮ ಕಾರ್ಯದರ್ಶಿ ಭಾಗ್ಯಮ್ಮ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!