ನಾಯಕನಹಟ್ಟಿಯಲ್ಲಿ ಸಂಭ್ರಮದ ಮಾರಮ್ಮನ ಹಬ್ಬ.
ನಾಯಕನಹಟ್ಟಿ ಪಟ್ಟಣದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಾರಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿ ಪ್ರತೀಕವಾದ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಯ ನಂತರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಭಾದ್ರಪದ ಮಾಸದ ಪ್ರತಿ ಮಂಗಳವಾರ ಮಾರಮ್ಮನ ಹಬ್ಬವನ್ನು ಆಚರಿಸಲಾಗುತ್ತದೆ.
ಮಂಗಳವಾರ ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಶ್ರೀ ದೊಡ್ಲು ಮಾರಿಕಾಂಬ ದೇವಾಲಯದಲ್ಲಿ ಸೋಮವಾರ ರಾತ್ರಿಯಿಂದಲೇ ದೇವರಿಗೆ ಹೂವಿನ ಅಲಂಕಾರ ಸೇರಿದಂತೆ ಹಲವು ಪೂಜಾ ಕಾರ್ಯಗಳು ನಡೆದವು.
ಮಾರಮ್ಮ ದೇವಿಗೆ ಸಕಲ ರೋಗ ನಿವಾರಣೆಗೆ ಹರಿಕೆ ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ದೊಡ್ಲು ಮಾರಿಕಾಂಬ ದೇವಾಲಯಕ್ಕೆ ಹರಕೆ ಹೊತ್ತರೆ ಸಿಡುವು. ಜ್ವರ. ಅಮ್ಮ. ಹೀಗೆ ಹಲವು ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಹರಿಕೆ ಗೊತ್ತಾ ಪೋಷಕರು ಚಿಕ್ಕ ಮಕ್ಕಳಿಗೆ ಬೇವಿನ ಸೊಪ್ಪಿನ ಉಡುಗೆ ತೊಡಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿದರು ಹಣ್ಣು ಕಾಯಿ ಕರ್ಪೂರ ಹೂಮಾಲೆ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಭಾವಕ್ಕೆ ಸಾಕ್ಷಿಯಾದರು.
ಇದೆ ವೇಳೆ ಗ್ರಾಮದ ಮುಖಂಡ ದಳವಾಯಿ ರುದ್ರಮುನಿ ಮಾತನಾಡಿದರು ಪುಣ್ಯಕ್ಷೇತ್ರ ನಾಯಕನಹಟ್ಟಿಯಲ್ಲಿ ಗೌರಸಮುದ್ರ ಮಾರಮ್ಮ ಜಾತ್ರೆ ಮುಗಿದ ನಂತರ ಮೂರನೇ ಮಂಗಳವಾರ ಇಲ್ಲಿ ಶ್ರೀ ದೊಡ್ಲು ಮಾರಿಕಾಂಬ ವಾರ್ಷಿಕ ಜಾತ್ರೆಯನ್ನು ಆಚರಣೆ ಮಾಡಲಾಗುತ್ತದೆ ಶ್ರೀ ದೊಡ್ಲು ಮಾರಿಕಾಂಬ ದೇವಿ ಆಶೀರ್ವಾದದಿಂದ ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ಸಮೃದ್ಧಿ ನೀಡಿ ಆಶೀರ್ವದಿಸಲಿ ಎಂದರು
ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣದ ಕೋಟೆ ಬ್ಲಾಕ್ ಸಮಸ್ತ ಗ್ರಾಮಸ್ಥರು ಯುವಕರು ಹಾಗೂ ನಾಯಕನಹಟ್ಟಿ ಪಟ್ಟಣದ ಸಮಸ್ತ ಗ್ರಾಮಸ್ಥರು ಇದ್ದರು

