ಚಳ್ಳಕೆರೆ :
ಹೊಳಲ್ಕೆರೆ: ವಾಹನಗಳ ಸಂಚಾರ ನಿಷೇಧ
ಹೊಳಲ್ಕೆರೆಯಲ್ಲಿ ಇದೇ ಸೆಪ್ಟೆಂಬರ್ 7 ರಂದು ವಿಶ್ವ ಹಿಂದೂ
ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ನಡೆಯಲಿದ್ದು, ಈ
ಹಿನ್ನೆಲೆಯಲ್ಲಿ ಡಿಸಿ ಟಿ. ವೆಂಕಟೇಶ್ ಅವರು ಹೊಳಲ್ಕೆರೆ ನಗರದ
ಕೆಲವೆಡೆ ಸಂಚಾರವನ್ನು ನಿಷೇಧಿಸಿ, ವಾಹನಗಳ ಮಾರ್ಗವನ್ನು
ಬದಲಿಸುವಂತೆ ಆದೇಶಿಸಿದ್ದಾರೆ. ಸೆಪ್ಟೆಂಬರ್ 7 ರಂದು ಬೆಳಿಗ್ಗೆ
6 ರಿಂದ ಮಧ್ಯರಾತ್ರಿ 12 ರವರೆಗೆ ರಾಷ್ಟ್ರೀಯ ಹೆದ್ದಾರಿ 369
ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಮುಖ್ಯ ರಸ್ತೆ ಮತ್ತು
ಇತರೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸಂಚಾರವನ್ನು
ನಿಷೇಧಿಸಲಾಗಿದೆ. ಬದಲಾದ ಮಾರ್ಗದಲ್ಲಿ ವಾಹನಗಳು
ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

