ನಾಯಕನಹಟ್ಟಿ: ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅದಕ್ಕೆ ಜಿದ್ದು ಬೀಳದೆ ಎಲ್ಲರೂ ಸಹೋದರರಂತೆ ಎಂಬ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ
ತಿಳಿಸಿದರು.

ಶುಕ್ರವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡನೇ ವಾರ್ಡಿನ ಶ್ರೀ ಕಾವಲು ಬಸವೇಶ್ವರ ನಗರದಲ್ಲಿ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶ್ರೀ ಕಾವಲು ಬಸವೇಶ್ವರ ನಗರದಲ್ಲಿ ಶ್ರೀ ಮಾರಮ್ಮನ ಹಬ್ಬದ ಪ್ರಯುಕ್ತ ಯುವಕರು ಮೊದಲನೇ ಬಾರಿಗೆ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟವನ್ನು ಮಾದಯ್ಯನಹಟ್ಟಿ ಶ್ರೀ ಕಾವಲಬಸ್ವೇಶ್ವರನಗರ ಜಾಗನೂರಹಟ್ಟಿ ಗ್ರಾಮಸ್ಥರ ಸಹಕಾರದಿಂದ ಯುವಕರು ಆಯೋಜಿಸಿದ್ದಾರೆ ಗ್ರಾಮೀಣ ಪ್ರದೇಶದ ಯುವಕರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಈ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಯುವಕರು ವಿಶ್ವಾಸದಿಂದ ಕ್ರೀಡೆಯನ್ನು ಹಾಡಿ ಮುಂದಿನ ಪೀಳಿಗೆಗೆ ಈ ಕ್ರೀಡಾ ಮನೋಭಾವ ಬೆಳೆಯುವಂತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಪಿ ತಿಪ್ಪೇಸ್ವಾಮಿ
ಮಾತನಾಡಿ, ಯುವಕರು ಸದೃಢ ದೇಹದಲ್ಲಿ ಸದೃಢ ಮನಸ್ಸು ಎಂಬಂತೆ ಎಲ್ಲಾ ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯಪೂರ್ಣ ಶಾರೀರಕ ದೇಹ ಮನಸ್ಸು ಹೊಂದಬಹುದು. ಕ್ರೀಡೆಯಲ್ಲಿನ ಸೋಲು ಗೆಲುವು ಜೀವನಕ್ಕೆ ಪಾಠವನ್ನು ಹೇಳುತ್ತದೆ ಮತ್ತು ಸೋತಾಗ ಧೈರ್ಯವನ್ನು ಬಲಪಡಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಆರ್ ತಿಪ್ಪೇಸ್ವಾಮಿ, ಉಜ್ಜಿನಪ್ಪ, ರೆಡಿಬೋರೆಯ್ಯ, ಬಡಗಿ ತಿಪ್ಪೇಸ್ವಾಮಿ, ಡಿ. ಬೋರಯ್ಯ, ಸಣ್ಣರಾಜಯ್ಯ, ಡೈಲಾಗ್ ತಿಪ್ಪೇಸ್ವಾಮಿ, ಶರಣಪ್ಪ, ಜಿ.ಕೆ. ಹಳ್ಳಿ ವಿಷ್ಣುಸಿಂಹ, ಕುಂಟ ಓಬಯ್ಯ, ಬೈಯಣ್ಣ, ಕಾಮರಾಜ್, ತಿಪ್ಪೇಶ್ ದೇವುಡ್ಲು, ತಿಪ್ಪೇಸ್ವಾಮಿ, ಪೂಜಾರಿ ನಾಗರಾಜ್, ಪೂಜಾರಿ ತಿಪ್ಪಯ್ಯ, ನಾಗರಾಜ್, ದೊಡ್ಡಪಾಲಯ್ಯ, ಕಾಮಯ್ಯ, ಯರ್ರಯ್ಯ, ಬೊಮ್ಮಯ್ಯ, ಬಸವರಾಜ್ ಎಸ್ ಡಿ ಎಂ ಸಿ ಅಧ್ಯಕ್ಷ
ಕೆ ತಿಪ್ಪೇಸ್ವಾಮಿ,

ತಂಡದ ಹೆಸರು: ಪವರ್ ಸ್ಟಾರ್ ಕ್ರಿಕೆಟರ್ಸ್ ,
ಜಡ್ಡು ಗೇಮ್ ಚೇಂಜರ್ಸ್, ರನ್ ವೇ ರೈಡರ್ಸ್, ಶ್ರೇಷ್ಠ ವಾರಿಯರ್ಸ್, ಲೋಕಲ್ ಲೆಜೆಂಡ್ಸ್, ಯುನಿವರ್ಸಲ್ ಹಿಟ್ಟರ್ಸ್, ತಂಡದ ಮಾಲೀಕರು ಆಟಗಾರರು ಸೇರಿದಂತೆ ಮಾದಯ್ಯನಹಟ್ಟಿ ಕಾವಲು ಬಸವೇಶ್ವರನಗರ, ಜಾಗನೂರಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!