ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ತಂದಿದ್ದು ನಾನೆ, ಹಣ
ಮಂಜೂರು ಮಾಡಿಸಿದ್ದು ನಾನೆ, ಪಟ್ಟಣ ಪಂಚಾಯಿತಿ ಸದಸ್ಯರ ಗೆಲುವಿಗೆ ಮೂಲ ಕಾರಣ ನಾನೆ ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ನೆರಲಗುಂಟೆ ಎಸ್.ತಿಪ್ಪೇಸ್ವಾಮಿ ಸ್ಪೋಟಕ ಹೇಳಿಕೆ ನೀಡಿದರು.

ಪಟ್ಟಣದ ಬುಧವಾರ ಸುದ್ದಿಗೊಷ್ಠಿಯೊಂದಿಗೆ ಅವರು ಮಾತನಾಡಿ

ಪಟ್ಟಣ ಪಂಚಾಯಿತಿಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿಯವರಿಗೆ ನೋಟೀಸ್ ನೀಡದೆ ಕೆಳಗಿಳಿಸಿದ್ದಾರೆ,

ನಾಯಕನಹಟ್ಟಿ ಹೋಬಳಿಯ ಕಾಂಗ್ರೆಸ್ ನಾಯಕರುಗಳು ಇದ್ದಂತವರು ಸರಿಯಿಲ್ಲ.

ನಾಯಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರಾಜ್ಯ ಸಂಪುಟದಿಂದ
ವಜಾಗೊಂಡಿರುವ ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣರವರನ್ನು ತನಿಖೆ ನಡೆಸದೆ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ.

ಇದು ನಾಯಕ ಮತ್ತು ಮಾದಿಗ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ.

ನಾಯಕ ಸಮುದಾಯ ಮತಬೇಕು, ನಮ್ಮವರು ಅಧಿಕಾರದಲ್ಲಿ ಇರುವುದು ಬೇಡವ? ಎಂದು

ಖಡಕ್ಕಾಗಿ ಮಾತನಾಡಿದರು. ನಾಯಕನ ಸಮುದಾಯದವರನ್ನು ವೋಟ್ ಬ್ಯಾಂಕ್‌ಗಾಗಿ ರಾಜಕಾರಣಕ್ಕೆ ಬೆಳೆಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪಂಚ ಗ್ಯಾರೆಂಟಿಯಿAದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ಗ್ಯಾರೆಂಟಿ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ವಕೀಲ ಬೋರಯ್ಯ, ದೊರೆಸ್ವಾಮಿ, ಡಿ.ಬಿ.ಬೋರಯ್ಯ ಹಾಗೂ ಇನ್ನೂ ಇತರರು ಇದ್ದರು.

About The Author

Namma Challakere Local News
error: Content is protected !!