ಜಗನ್ಮಾತೆ ಗೌರಸ ಮುದ್ರ ಮಾರಮ್ಮ ದೇವಿ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರದ್ದಾ ಮತ್ತು ಭಕ್ತಿಯ ಧಾರ್ಮಿಕ ಕ್ಷೇತ್ರ ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ರಘುಮೂರ್ತಿ ಹೇಳಿದರು
ಅವರು ಇಂದು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಜಗನ್ಮಾತೆ ಮಾರಮ್ಮ ಜಾತ್ರ ಮಹೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ಬಕ್ತಾದಿಗಳು ಕಠಿಣ ವ್ರತ ಶ್ರದ್ಧೆ ಮತ್ತು ಭಕ್ತಿಗಳಿಂದ ಲಕ್ಷಾಂತರ ಭಕ್ತಾದಿಗಳು ಈ ಜಾತ್ರೆಗೆ ಭಾಗವಹಿಸುತ್ತಾರೆ ಇಡೀ ದಕ್ಷಿಣ ಭಾರತದಲ್ಲಿ ನಂಬಿಕೆಯ ನೆಲೆನೀ ಡಾಗಿದೆ ವಿಶಿಷ್ಟ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ಇತಿಹಾಸವಿರುವ ಈ ದೇವಸ್ಥಾನ ಬುಡಕಟ್ಟು ಇತಿಹಾಸದ ಬೀಡಾಗಿದೆ ಈ ದೇವಿಯ ಆರಾಧನೆ ಯಿಂದ ಇಡೀ ಜಿಲ್ಲೆ ಯಲ್ಲಿ ಶಾಂತಿ ನೆಮ್ಮದಿ ಮತ್ತು ಸಾಮರಸ್ಯ ಮನೆ ಮಾಡುವುದರ ಜೊತೆಗೆ ಕೃಷಿಕರಿಗೆ ಒಳ್ಳೆಯ ಬೆಳೆ ಮತ್ತು ಮಳೆ ಲಭಿಸಲಿ ಎಂದು ಆಶಿಸಿದರು
ಈ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ ಎತ್ನಟ್ಟಿ ಗೌಡ್ರು ಎಲ್ ಐ ಸಿ ಒಬಣ್ಣ ದೊಡ್ಡ ಬೋರಯ್ಯ ಹೊನ್ನೂರ್ ಗೋವಿಂದಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಒಬಣ್ಣ ಉಪಸ್ಥಿತರಿದ್ದರು

