filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 50;

ಚಳ್ಳಕೆರೆ :

ವಿದ್ಯಾರ್ಥಿನಿ
ವರ್ಷಿತಾಳ ಕೊಲೆ ಪ್ರಕರಣ ಖಂಡಿಸಿ
ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲು ಮತ್ತು ವರ್ಷಿತಾಳ ಕುಟುಂಬಕ್ಕೆ ವಿವಿಧ
ಸೌಲಭ್ಯಗಳನ್ನು ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಚಳ್ಳಕೆರೆ , ಹಾಗೂ ಜಯಣ್ಣ ನರ್ಸಿಂಗ್ ಕಾಲೇಜ್, ವಾಸವಿ ಪದವಿ ಪೂರ್ವ ಕಾಲೇಜು, ಬಾಪೂಜಿ ಕಾಲೇಜ್, ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿಯರು,ಹಾಗೂ ವಿದ್ಯಾರ್ಥಿಗಳ ಒಕ್ಕೂಟ ಸಹಯೋಗದಲ್ಲಿ ಇಂದು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ತಹಶೀಲ್ದಾರ್ ರೆಹಾನ್ ಪಾಷರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ದಲಿತ ಸಂಘಟನೆಗಳ ತಾಲೂಕು ಸಂಚಾಲಕ ಟಿ.ವಿಜಯ್ ಕುಮಾರ್ ಮಾತನಾಡಿ,

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಶತಮಾನವೇ ಸಂಭವಿಸಿದರೂ,ಈ ದೇಶಕ್ಕೆ ಸರ್ವರು
ಸಮಾನರೆಂಬ ಸಂವಿಧಾನ ರಚಿಸಿದರು. ಹಣ್ಣಿಗೆ ಶೋಷಣೆ,ಕೊಲೆ,ಅತ್ಯಾಚಾರ, ದೌರ್ಜನ್ಯ, ಲೈಂಗಿಕ
ಕಾರಣಗಳಿಂದಾಗಿ ಹೆಣ್ಣಿನ ಮೇಲೆ ಕ್ರೌರ್ಯ ನಡೆಯುತ್ತಲೇ ಇವೆ. ಅದಕ್ಕೆ ಸಾಕ್ಷಿ ಎಂಬಂತ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಕೋವೆರಟ್ಟಿಯ ವಿದ್ಯಾರ್ಥಿನಿ ವರ್ಷಿತಾಳ
ಕೊಲೆ ನಡೆದಿದೆಯೋ ಗೊತ್ತಿಲ್ಲ, ಆದರೆ ಆರೋಪಿಯ ಹೇಳಿಕೆಯೊಂದೇ ಈ ಮೊಕದ್ದಮೆ ಯಲ್ಲಿ
ಆಧಾರವಾಗಿದೆ.
ಇದರಿಂದ ಪೋಲಿಸ್ ಇಲಾಖೆ ಕೇವಲ ಕೊಲೆ ಆರೋಪಿಯ ಹೇಳಿಕೆ ಪರಿಗಣಿಸದೆ ವರ್ಷಿತಾಳಾ ಕುಟುಂಬದ ಹೇಳಿಕೆ ನಮೂದಿಸಿದ ಪ್ರಕರಣ ತನಿಖೆ ಮಾಡಬೇಕು, ಕೊಲೆಯ ಹಿಂದೆ ಯಾರಿದ್ದರೆ ಎಂಬುದು ಬಯಲಿಗೆ ಬರಬೇಕು, ದಲಿತ ವಿದ್ಯಾರ್ಥಿ ನಿ ಎಂಬ ಕಾರಣಕ್ಕೆ ಕೊಲೆ ಮಾಡುವುದು ಕಾನೂನು ಕಠಿಣ ಇಲ್ಲವೆಂಬಂದು ಗೋಚರಿಸುತ್ತದೆ,

ಕೊಲೆಯಾದ ವರ್ಷಿತ ವಿದ್ಯಾಭ್ಯಾಸದಲ್ಲಿ ದ್ವಿತೀಯ ಬಿಎ ಓದುತ್ತಿದ್ದವಳಾಗಿದ್ದು ಮೊಬೈಲ್ ನ ಸಾಮಾಜಿಕ
ಜಾಲತಾಣವಾದ ಇನ್ಸಾಗ್ರಾಮ್ ಮೂಲಕ ಆರೋಪಿ ಚೇತನ್ ಪರಿಚಯವಾದನಂತೆ ಈ ಪರಿಚಯ
ಪರಸ್ಪರ ಪ್ರೀತಿಗೆ ತಿರುಗಿ ಇಬ್ಬರೂ ಪ್ರೀತಿಸುತ್ತಿದ್ದರಂತೆ, ಇಷ್ಟಕ್ಕೆ ನತದೃಷ್ಟ ತನ್ನನ್ನು
ಮದುವೆಯಾಗುವಂತೆ ಆರೋಪಿ ಚೇತನನ್ನು ಕೇಳಿಕೊಂಡರೆ ಕೊಲೆ ಮಾಡುವುದೇ…ಆದ್ದರಿಂದ ಸರಕಾರ ಉಗ್ರವಾದ ಶಿಕ್ಷೆ ನೀಡುವ ಮೂಲಕ
ಕುಟುಂಬಕ್ಕೆ ಆದಾರವಾಗಬೇಕಿದ್ದ ವರ್ಷಿತಾಳ ಕುಟುಂಬಕ್ಕೆ ಸರಕಾರದ ಮೂಲಕ ಜಮೀನು ಹಾಗೂ ಕುಟುಂಬದ ಸದಸ್ಯರಿಗೆ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಮಾದಿಗ ದಂಡೋರ ಜಿಲ್ಲಾಧ್ಯಕ್ಷ ದ್ಯಾವರನಹಳ್ಳಿ ತಿಪ್ಪೇಸ್ವಾಮಿ,
ದ್ಯಾವರನಹಳ್ಳಿ ಆನಂದ ಮಾತನಾಡಿ, ಈ ಪ್ರಕರಣದಲ್ಲಿ ಕೃತ್ಯ ನಡೆಯುವುದಕ್ಕೆ ಮತ್ತು ನಡೆದಿರುವುದಕ್ಕೆ ಮತ್ತೊಬ್ಬ ಸಾಕ್ಷಿ
ಇಲ್ಲದಿರುವುದಕ್ಕೆ ಆರೋಪಿಯ ಹೇಳಿಕೆ ಪ್ರಮುಖವಾಗಿದೆ. ಬಹುಶಃ ಪ್ರಪಂಚದ ಎಲ್ಲಾ ಪ್ರೇಮ
ಪಕರಣಗಳಲ್ಲಿ ಮದುವೆಯಾಗುವುದಿಲ್ಲ ಎಂದರೆ? ಸಾಯುವುದನ್ನು ಕಂಡಿದ್ದೇವೆ. ಆದರೆ ಈ
ಪ್ರಕರಣದಲ್ಲಿ ಮದುವೆಯಾಗೋ ಎಂದಿದ್ದಕ್ಕೆ ಕೊಲೆ ಮಾಡಿದ್ದಾನೆ! ಇದೊಂದು ರೀತಿಯ ವಿಶೇಷ
ಪಕರಣವಾಗಿದೆ. ಆದ್ದರಿಂದ ಪೊಲೀಸ್ ತನಿಖೆ ಕೇವಲ ಕೊಲೆ ಮಾಡಿದವನ್ನನ್ನು ರೋಗಿ ಎಂದು ಭಾವಿಸದೆ ಕೊಲೆ ಹಂತಕನಿಗೆ ಕಠಿಣವಾದ ಶಿಕ್ಷೆ ನೀಡಿದಾಗ ಮಾತ್ರ ಇಂತಹ ವಿದ್ಯಾರ್ಥಿಗಳ ಕೊಲೆಗಳನ್ನು ನಿಲ್ಲಿಸಬಹುದು ಎಂದರು.

ಇದೇ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ ತಾಲೂಕು ಸಂಚಾಲಕ ಟಿ ವಿಜಯ್ ಕುಮಾರ್ ಹೊನ್ನೂರ ಸ್ವಾಮಿ ಪಟ್ಟಪ್ಪನಹಳ್ಳಿ ಕಾಂತರಾಜ್ ದ್ಯಾವರ್ನಳ್ಳಿ ತಿಪ್ಪೇಸ್ವಾಮಿ ಹೊನ್ನೂರು ಮಾರಣ್ಣ ನಲಗೇತನಟ್ಟಿ ನಾಗರಾಜ್ ಧನ್ಯವಾದ ಸುರೇಶ್ ಭೀಮಣ್ಣ ನಗರಂಗೆರೆ ಜಗದೀಶ್ ಮಹಾಂತೇಶ್ ಚೋಳೂರು ಮಂಜುನಾಥ್ ತಿಪ್ಪೆ ರುದ್ರಪ್ಪ ಇನ್ನು ಶಾಲಾ ವಿದ್ಯಾರ್ಥಿನಿಯರು ದಲಿತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!